<ಗದುಗಿನ ಭಾರತ ಪದಕೋಶ
ಸ
 1.		ಷಟ್‍ತರ್ಕ, ಸಾಂಖ್ಯ , ಭೀಷ್ಮ ಪರ್ವ,3,64, , ,  ವೈಶೇಷಿಕ,  ಮೀಮಾಂಸ,  ವೇದಾಂತವೆಂಬ 6 ಶಾಸ್ತ್ರಗಳ, 
 2.		ಷಡುರಸ, ಸಿಹಿ, ಉದ್ಯೋಗ ಪರ್ವ,8,64, , ,  ಹುಳಿ ,  ಒಗರು ,  ಕಹಿ,
 3.		ಢವಣಿಸು, ಢವಣಿ ಎಂಬ ಚÀರ್ಮವಾದ್ಯವನ್ನು ಬಾರಿಸು. ಢಾಣೆ, ಕರ್ಣ ಪರ್ವ,7,13
 4.		ಸಂಕರುಷಣ, ಬಲರಾಮ (ಒಂದು ಗರ್ಭದಿಂದ ಮತ್ತೊಂದು ಗರ್ಭಕ್ಕೆ ಸಂಕ್ರಮಿಸಿದ ಕಾರಣ ಸಂಕರ್ಷಣನೆಂದು ಹೆಸರು), ಆದಿ ಪರ್ವ,19,40
 5.		ಸಂಕಲ, ಹಿಂಡು, ಉದ್ಯೋಗ ಪರ್ವ,4,13
 6.		ಸಂಕಲೆ, ಸಂಕೋಲೆ, ದ್ರೋಣ ಪರ್ವ,3,2
 7.		ಸಂಕಲೆವನೆ, ಸೆರೆಮನೆ, ಅರಣ್ಯ ಪರ್ವ,8,10
 8.		ಸಂಕುಲ, ಹಿಂಡು/ಸಮೂಹ., ಉದ್ಯೋಗ ಪರ್ವ,4,104
 9.		ಸಂಕೇತ, ಒಪ್ಪಂದ, ಗದಾ ಪರ್ವ,5,46
 10.		ಸಂಕ್ರಮಿಸು, ನಡೆಸು, ಆದಿ ಪರ್ವ,11,46
 11.		ಸಂಗ, ಸೇರಿಕೆ, ಆದಿ ಪರ್ವ,12,2
 12.		ಸಂಗಡಿಸು, ಒಂದುಗೂಡು, ಶಲ್ಯ ಪರ್ವ,3,9
 13.		ಸಂಗತ, ಸಂಗಮ, ಆದಿ ಪರ್ವ,19,12
 14.		ಸಂಗತ, ಜೊತೆಯಲ್ಲಿದ್ದವನು, ಗದಾ ಪರ್ವ,5,28
 15.		ಸಂಗತಿ, ಪ್ರಸಂಗ, ಆದಿ ಪರ್ವ,7,52
 16.		ಸಂಗರ, ಸಂಗ್ರಾಮ(ಸಂ)  ಯುದ್ಧ., ಗದಾ ಪರ್ವ,8,47
 17.		ಸಂಗಾತ, ಜೊತೆಯಲ್ಲಿ, ಉದ್ಯೋಗ ಪರ್ವ,7,15
 18.		ಸಂಗಿ, ಆಸಕ್ತಿ, ಉದ್ಯೋಗ ಪರ್ವ,9,70
 19.		ಸಂಘಟನೆಗೆ, ಸೈನ್ಯವನ್ನು ಒಂದೆಡೆ ಸೇರಿಸಲು, ಶಲ್ಯ ಪರ್ವ,3,53
 20.		ಸಂಘಟಿಸಿ, ನಿಯೋಜಿಸಿ, ಭೀಷ್ಮ ಪರ್ವ,3,3
 21.		ಸಂಘಟಿಸು, ಉಂಟಾಗು, ಆದಿ ಪರ್ವ,19,4
 22.		ಸಂಚಕಾರ, ಮುಂಗಡ (ಮೊದಲು ಘೋಷಿಸಿ ಅನಂತರ ಕೊಲ್ಲುವಿಕೆ), ವಿರಾಟ ಪರ್ವ,3,71
 23.		ಸಂಚದ, ಸಂಪರ್ಕ, ವಿರಾಟ ಪರ್ವ,8,82
 24.		ಸಂಚರಣೆ, ಸಂಚಾರ, ಆದಿ ಪರ್ವ,11,12
 25.		ಸಂಚರಿಸಿ, ತಿರುಗಾಡಿ, ಆದಿ ಪರ್ವ,20,11
 26.		ಸಂಚಲ, ನಡುಕ, ಭೀಷ್ಮ ಪರ್ವ,6,17
 27.		ಸಂಚಿತ, ಸಂಗ್ರಹಿತವಾದ, ಗದಾ ಪರ್ವ,8,21
 28.		ಸಂಚಿತ, ಕೂಡಿದ, ವಿರಾಟ ಪರ್ವ,5,48
 29.		ಸಂಚಿಸು, ಗಳಿಸು/ಪಡೆ, ಉದ್ಯೋಗ ಪರ್ವ,9,1
 30.		ಸಂಜನಿತ, ಹುಟ್ಟಿದುದು , ಗದಾ ಪರ್ವ,5,46
 31.		ಸಂಜನಿಸಿ, ಉಂಟುಮಾಡಿ, ಸಭಾ ಪರ್ವ,1,40
 32.		ಸಂಜನಿಸು, ಸೃಷ್ಟಿಸು, ಗದಾ ಪರ್ವ,11,37
 33.		ಸಂಜನಿಸು, ಪ್ರಕಟಗೊಳ್ಳು, ಆದಿ ಪರ್ವ,8,32
 34.		ಸಂಜನಿಸು, ಉಂಟಾಗು, ಭೀಷ್ಮ ಪರ್ವ,4,98
 35.		ಸಂಜನಿಸು, ಹುಟ್ಟು, ಉದ್ಯೋಗ ಪರ್ವ,6,7
 36.		ಸಂಜಾತ, ಜನಿಸಿದ, ಆದಿ ಪರ್ವ,20,10
 37.		ಸಂಜೀವನಿ, ಸಂಜೀವನಿ ಎಂದರೆ ಬದುಕನ್ನು ಕೊಡುವ ಒಂದು ಬಳ್ಳಿ, ವಿರಾಟ ಪರ್ವ,10,35
 38.		ಸಂತತಿ, ಪೀಳಿಗೆ, ಆದಿ ಪರ್ವ,10,13
 39.		ಸಂತಮಸ, ಗಾಢಾಂಧಕಾರ, ಆದಿ ಪರ್ವ,20,44
 40.		ಸಂತರ್ಪಣ, ತೃಪ್ತಿಪಡಿಸುವುದು, ಉದ್ಯೋಗ ಪರ್ವ,4,71
 41.		ಸಂತವಿಡಿ, ಸಾಂತ್ವನಗೊಳಿಸು, ಆದಿ ಪರ್ವ,6,39
 42.		ಸಂತವಿಡು, ಸಂತಯಿಸು, ಗದಾ ಪರ್ವ,4,7
 43.		ಸಂತವಿಸಿ, ಸಮಾಧಾನ ಮಾಡಿ , ಸಭಾ ಪರ್ವ,5,8
 44.		ಸಂತವಿಸು, ಸಂತೈಸು, ಗದಾ ಪರ್ವ,2,32
 45.		ಸಂತವಿಸು, ತಡೆದುಕೋ, ವಿರಾಟ ಪರ್ವ,9,11
 46.		ಸಂತಾನ, ಸಂತತಿ, ಆದಿ ಪರ್ವ,10,5
 47.		ಸಂತೈಸಿ, ಸಮಾಧಾನಿಸಿ, ಗದಾ ಪರ್ವ,6,32
 48.		ಸಂತೈಸು, ಸಂಭಾಳಿಸು, ಗದಾ ಪರ್ವ,2,22
 49.		ಸಂತೈಸು, ಸಮಾಧಾನಪಡಿಸು., ಗದಾ ಪರ್ವ,11,72
 50.		ಸಂದ, ಸಮ್ಮತವಾದ, ಆದಿ ಪರ್ವ,8,92
 51.		ಸಂದ, ಪ್ರಯೋಗಿಸಿದÀ, ವಿರಾಟ ಪರ್ವ,7,40
 52.		ಸಂದ, ಪ್ರಖ್ಯಾತ, ಆದಿ ಪರ್ವ,6,30
 53.		ಸಂದಣಿ, ಹಿಂಡು, ಉದ್ಯೋಗ ಪರ್ವ,7,30
 54.		ಸಂದಣಿ, ಜನಸಮೂಹ, ಗದಾ ಪರ್ವ,11,22
 55.		ಸಂದಣಿಸಿ, ಒಟ್ಟಾಗಿ ಸೇರಿ, ಭೀಷ್ಮ ಪರ್ವ,1,3
 56.		ಸಂದಣಿಸಿದುದು, ಸೇರಿದವು, ಉದ್ಯೋಗ ಪರ್ವ,11,38
 57.		ಸಂದಣಿಸು, ಒಟ್ಟಾಗಿ ಬರು, ಅರಣ್ಯ ಪರ್ವ,4,18
 58.		ಸಂದನು, ಪ್ರಸಿದ್ಧನಾದನು, ಆದಿ ಪರ್ವ,2,19
 59.		ಸಂದನು, ಕೂಡಿಕೊಂಡನು, ಆದಿ ಪರ್ವ,8,84
 60.		ಸಂದವು, ಕಳೆದವು, ಶಲ್ಯ ಪರ್ವ,1,34
 61.		ಸಂದಷ್ಟ, ಕಚ್ಚಿದ, ಉದ್ಯೋಗ ಪರ್ವ,4,12
 62.		ಸಂದಿಗ್ಧ, ಜಟಿಲ, ಆದಿ ಪರ್ವ,19,5
 63.		ಸಂದುಗಟ್ಟು, ಸರಿಯಾದ ಕಾಲ, ಆದಿ ಪರ್ವ,8,86
 64.		ಸಂದುದು, ಸಂಪೂರ್ಣವಾದುದು, ಗದಾ ಪರ್ವ,8,11
 65.		ಸಂದುದು, ನಡೆಯಿತು, ಗದಾ ಪರ್ವ,13,0
 66.		ಸಂದುದೇ, ಮುಗಿಯಿತೇ, ಗದಾ ಪರ್ವ,11,23
 67.		ಸಂದೆಯ, ಸಂದೇಹ (ಸಂ) ಬಲುಹು, ಗದಾ ಪರ್ವ,5,51
 68.		ಸಂಧಿವಿಗ್ರಹ, ರಾಯಭಾರ, ಉದ್ಯೋಗ ಪರ್ವ,3,89
 69.		ಸಂಧಿಸೆನು, ಹೂಡುವುದಿಲ್ಲ., ಭೀಷ್ಮ ಪರ್ವ,1,38
 70.		ಸಂಧ್ಯಾಭಿವಂದನ, ಸಂಧ್ಯಾವಂದನೆ, ಭೀಷ್ಮ ಪರ್ವ,8,8
 71.		ಸಂಧ್ಯಾವಂದನೆ, ತ್ರಿಕಾಲಗಳಲ್ಲಿ ಮಾಡುವ ಸಂಧ್ಯಾ ದೇವಿಯ ವಂದನೆಯ ಕ್ರಿಯೆ, ಗದಾ ಪರ್ವ,8,54
 72.		ಸಂಧ್ಯೋಪಾಸ್ಥೆ, ಸಂಧ್ಯಾನ, ಆದಿ ಪರ್ವ,10,6
 73.		ಸಂನಿಧಿ, ಸಾಮೀಪ್ಯ, ಆದಿ ಪರ್ವ,16,41
 74.		ಸಂಪದ, ಐಶ್ವರ್ಯ, ಶಲ್ಯ ಪರ್ವ,3,60
 75.		ಸಂಪನ್ನ, ಉತ್ತಮವಾದ, ಗದಾ ಪರ್ವ,12,2
 76.		ಸಂಪನ್ನ ಶಠ, ಶಠರÀಲ್ಲಿ, ಗದಾ ಪರ್ವ,11,3
 77.		ಸಂಪ್ರತಿ, ಸಂಧಾನ, ಉದ್ಯೋಗ ಪರ್ವ,2,38
 78.		ಸಂಪ್ರತಿ, ಸಂಧಾನ., ಉದ್ಯೋಗ ಪರ್ವ,6,17
 79.		ಸಂಪ್ರತಿಥ, ಅತಿಪ್ರಸಿದ್ಧರಾದ, ದ್ರೋಣ ಪರ್ವ,17,23
 80.		ಸಂಪ್ರಥಿತ, ಸದ್ಯದ ಪರಿಸ್ಥಿತಿ/ಪ್ರಕೃತ, ಉದ್ಯೋಗ ಪರ್ವ,2,3
 81.		ಸಂಭಾವ, ಭಾವನೆ, ಗದಾ ಪರ್ವ,7,44
 82.		ಸಂಭಾವಕರು, ಮನ್ನಣೆ ನೀಡುವವರು., ಶಲ್ಯ ಪರ್ವ,1,20
 83.		ಸಂಭಾವನ, ಉಚಿತ, ಆದಿ ಪರ್ವ,15,12
 84.		ಸಂಭಾವನೀಯ, ಗೌರವಾರ್ಹ, ಆದಿ ಪರ್ವ,11,38
 85.		ಸಂಭಾವನೀಯರು, ಯೋಗ್ಯರಾದವರು, ಆದಿ ಪರ್ವ,10,20
 86.		ಸಂಭಾವನೆ, ಮನ್ನಣೆ, ಭೀಷ್ಮ ಪರ್ವ,6,38
 87.		ಸಂಭಾವನೆ, ಗೌರವ , ಗದಾ ಪರ್ವ,5,13
 88.		ಸಂಭಾವನೆಯಲಿ, ಆಲೋಚನೆಯಲ್ಲಿ, ಭೀಷ್ಮ ಪರ್ವ,9,45
 89.		ಸಂಭಾವಿತರು, ಬ್ರಾಹ್ಮಣ ವೇಷವನ್ನು ಕಲ್ಪಿಸಿಕೊಂಡಿರುತ್ತೇವೆ ಎಂಬರ್ಥ, ವಿರಾಟ ಪರ್ವ,1,6
 90.		ಸಂಭಾವಿಸಿದ, ಸಂಭವಿಸಿದ , ವಿರಾಟ ಪರ್ವ,2,2
 91.		ಸಂಭಾವಿಸು, ಸಾಂತ್ವನ ನೀಡು, ಗದಾ ಪರ್ವ,4,26
 92.		ಸಂಭಾವಿಸು, ಸಂತೈಸು.  ಶೋಕವಹ್ನಿ, ಗದಾ ಪರ್ವ,8,19
 93.		ಸಂಭಾವಿಸುತ, ಉಗ್ಗಡಿಸುತ್ತ, ಭೀಷ್ಮ ಪರ್ವ,6,11
 94.		ಸಂಭಾವಿಸುವುದು, ಬಂದಿರುತ್ತದೆ ಸಂಭವಿಸಿರುತ್ತದೆ., ವಿರಾಟ ಪರ್ವ,9,25
 95.		ಸಂಭಾಳಿಸು, ಸಹಿಸು, ಕರ್ಣ ಪರ್ವ,27,1
 96.		ಸಂಭಾಳಿಸು, ನಿರ್ವಹಿಸು, ಗದಾ ಪರ್ವ,1,33
 97.		ಸಂಭಿನ್ನ ರೋಷ, ಉಕ್ಕಿ ಬಂದ ಕೋಪ, ಭೀಷ್ಮ ಪರ್ವ,6,43
 98.		ಸಂಭ್ರಾಂತಚೇತನ, ಸ್ಥಿರತೆ ಕಳೆದುಕೊಂಡ ಮನಸ್ಸು, ಗದಾ ಪರ್ವ,5,37
 99.		ಸಂಮುಖ, ಹತ್ತಿರ, ಆದಿ ಪರ್ವ,20,17
 100.		ಸಂಮೇಳ, ಸಖ್ಯ, ಆದಿ ಪರ್ವ,17,23
 101.		ಸಂವರಣೆ, ಸಂರಕ್ಷಣೆ , ವಿರಾಟ ಪರ್ವ,4,31
 102.		ಸಂವರಣೆ, ಸಜ್ಜು, ಉದ್ಯೋಗ ಪರ್ವ,1,11
 103.		ಸಂವರಿಸಿ, ಸರಿಪಡಿಸಿ, ವಿರಾಟ ಪರ್ವ,6,12
 104.		ಸಂವರಿಸಿ, ಸಿದ್ಧಮಾಡಿ, ಗದಾ ಪರ್ವ,13,5
 105.		ಸಂವರಿಸಿ, ತಡೆಗಟ್ಟಿ, ಭೀಷ್ಮ ಪರ್ವ,8,60
 106.		ಸಂವರಿಸು, ಸೇರಿಸು, ಗದಾ ಪರ್ವ,9,13
 107.		ಸಂವರಿಸು, ಸಿದ್ಧನಾಗು, ಆದಿ ಪರ್ವ,14,20
 108.		ಸಂವರಿಸು, ಜೋಪಾನ ಮಾಡು , ಗದಾ ಪರ್ವ,4,7
 109.		ಸಂವರಿಸು, ರಕ್ಷಿಸು, ಕರ್ಣ ಪರ್ವ,13,12
 110.		ಸಂವರಿಸು, ಕೂಡಿಹಾಕು, ಉದ್ಯೋಗ ಪರ್ವ,4,88
 111.		ಸಂವರಿಸು, ತಡೆದುಕೋ, ವಿರಾಟ ಪರ್ವ,8,47
 112.		ಸಂವರಿಸುವುದು, ಹೊಂದುವುದು, ಉದ್ಯೋಗ ಪರ್ವ,4,112
 113.		ಸಂವರ್ತಕ, ಪ್ರಳಯ ಕಾಲದ ಅಗ್ನಿ, ದ್ರೋಣ ಪರ್ವ,4,37
 114.		ಸಂಶಯ, ಸಂದೇಹ, ಆದಿ ಪರ್ವ,14,28
 115.		ಸಂಸರ್ಗ, ಒಡನಾಟ, ಆದಿ ಪರ್ವ,11,3
 116.		ಸಂಸಾರಾನುಗತಿ, ಸಂಸಾರದ ಕ್ರಮ, ಗದಾ ಪರ್ವ,11,11
 117.		ಸಂಸೃತಿ, ಸಂಸಾರ, ಆದಿ ಪರ್ವ,16,51
 118.		ಸಂಸೃತಿ, ಸಂಸಾರ , ಅರಣ್ಯ ಪರ್ವ,5,37
 119.		ಸಂಸೃತಿ, ಪ್ರಪಂಚ, ಸಭಾ ಪರ್ವ,1,26
 120.		ಸಂಸ್ಕøತಿ, ಮಾಡಬೇಕಾದ ಕೆಲಸಗಳು, ಗದಾ ಪರ್ವ,12,24
 121.		ಸಂಸ್ತರಣ, ಹಾಸಿಗೆ, ಸಭಾ ಪರ್ವ,1,59
 122.		ಸಂಸ್ಪರುಶನ, ಮುಟ್ಟುವಿಕೆ, ಆದಿ ಪರ್ವ,4,48
 123.		ಸಂಹನ, ದೇಹ, ಶಲ್ಯ ಪರ್ವ,3,48
 124.		ಸಂಹರಣ, ಪರಿಹಾರ, ಆದಿ ಪರ್ವ,19,7
 125.		ಸಂಹರಣ, ಉಪಸಂಹಾರ, ಆದಿ ಪರ್ವ,16,18
 126.		ಸಂಹರಿಸು, ನಾಶಗೊಳಿಸು, ಗದಾ ಪರ್ವ,11,31
 127.		ಸಂಹೃತ, ನಾಶಗೊಳಿಸಿದ, ವಿರಾಟ ಪರ್ವ,10,34
 128.		ಸಂಹೃತಿ, ಸಂಹಾರ, ಅರಣ್ಯ ಪರ್ವ,6,56
 129.		ಸಂಹೃತಿಕರ್ಮ, ಸಂಹಾರ ಕಾರ್ಯ, ಆದಿ ಪರ್ವ,20,59
 130.		ಸಂಹೃದಯ, ಸಮಾನ ಹೃದಯ, ಗದಾ ಪರ್ವ,9,6
 131.		ಸಗರ್ವಿತ, ಧಾಷ್ಟ್ರ್ಯ ಉಳ್ಳವನು, ವಿರಾಟ ಪರ್ವ,10,7
 132.		ಸಗಾಢ, ರಭಸ , ಗದಾ ಪರ್ವ,7,28
 133.		ಸಗಾಢ, ಗಾಢವಾದ, ಗದಾ ಪರ್ವ,6,20
 134.		ಸಗಾಢದೊಳು, ಗಟ್ಟಿಯಾಗಿ, ಭೀಷ್ಮ ಪರ್ವ,5,2
 135.		ಸಗ್ಗಳೆ, ಚರ್ಮದ ಚೀಲ., ವಿರಾಟ ಪರ್ವ,7,42
 136.		ಸಘಾಟದ, ವೇಗ ಶಾಲಿಯಾದ, ಆದಿ ಪರ್ವ,18,6
 137.		ಸಘಾಟಿಕೆ, ಅತಿಶಯತೆ, ಭೀಷ್ಮ ಪರ್ವ,3,68
 138.		ಸಘಾಡ, ರಭಸ, ಗದಾ ಪರ್ವ,2,14
 139.		ಸಘಾಡನು, ಗರ್ವಿಷ್ಠನು, ಭೀಷ್ಮ ಪರ್ವ,9,36
 140.		ಸಘಾಡಿಕೆ, ತೀಕ್ಷ್ಣ, ದ್ರೋಣ ಪರ್ವ,6,11
 141.		ಸಘಾಡಿಸಿತು, ಒಟ್ಟಾಯಿತು, ಭೀಷ್ಮ ಪರ್ವ,2,5
 142.		ಸಘಾನತನ, ದೊಡ್ಡಸ್ತಿಕೆ, ಭೀಷ್ಮ ಪರ್ವ,6,41
 143.		ಸಘಾನತೆ, ದರ್ಪ, ಶಲ್ಯ ಪರ್ವ,2,63
 144.		ಸಘಾನರು, ಸಘನರು, ಗದಾ ಪರ್ವ,6,35
 145.		ಸಚರ ಅಚರ, ಜಂಗಮ ಸ್ಥಾವರ, ಭೀಷ್ಮ ಪರ್ವ,3,56
 146.		ಸಚ್ಚಿದಾತ್ಮಕ, ಚೈತನ್ಯ ಸ್ವರೂಪನಾದ ಆತ್ಮ, ಭೀಷ್ಮ ಪರ್ವ,3,45
 147.		ಸಜ್ಜನರು, ಸಂಭಾವಿತರು, ಆದಿ ಪರ್ವ,8,26
 148.		ಸಜ್ಜರಸ, ರಾಳ, ಆದಿ ಪರ್ವ,8,69
 149.		ಸಜ್ಜೆ, ಮಲಗುವ ಕೋಣೆ , ಗದಾ ಪರ್ವ,9,34
 150.		ಸಜ್ಜೆಯೋವರಿ, ಮಲಗುವ ಕೋಣೆ, ಗದಾ ಪರ್ವ,9,27
 151.		ಸಜ್ಜೋಡು, ಕುದುರೆಯ ಬೆನ್ನಿನ ಮೇಲೆ ಹಾಕಿದ ಕವಚ, ಶಲ್ಯ ಪರ್ವ,3,51
 152.		ಸತಿನಿವಹ, ಹೆಂಗಸರ ಗುಂಪು, ವಿರಾಟ ಪರ್ವ,10,55
 153.		ಸತೃಣಾಸಿ, ಹುಲ್ಲಿನ ಕತ್ತಿ, ಕರ್ಣ ಪರ್ವ,23,6
 154.		ಸತ್ಕರ್ಮ, ಒಳ್ಳೆಯ ಕೆಲಸಗಳು, ಗದಾ ಪರ್ವ,11,7
 155.		ಸತ್ಕರ್ಮಬಾಹಿರ, ಒಳ್ಳೆಯ ಕೆಲಸಗಳಿಂದ ಹೊರತಾದವನು, ಗದಾ ಪರ್ವ,11,7
 156.		ಸತ್ಕಾರ, ಮರ್ಯಾದೆ, ಆದಿ ಪರ್ವ,17,32
 157.		ಸತ್ತಿಗೆ, ಬೆಳ್ಗೊಡೆ, ಭೀಷ್ಮ ಪರ್ವ,8,11
 158.		ಸತ್ತಿಗೆ, ರಾಜಲಾಂಛನವಾದ ಛತ್ರಿ, ಶಲ್ಯ ಪರ್ವ,3,18
 159.		ಸತ್ತಿಗೆ, ಕೊಡೆ, ಭೀಷ್ಮ ಪರ್ವ,3,15
 160.		ಸತ್ತ್ವೋತ್ಕರುಷವಂತರು, ಸಾತ್ತ್ವಿಕರಲ್ಲಿ ಉತ್ಕøಷ್ಟರಾದವರು., ಆದಿ ಪರ್ವ,7,69
 161.		ಸತ್ಯ ಭುಜಬಲಗೂಡಿ, ಸತ್ಯದ ಬಾಹುಬಲದೊಡನೆ ಸೇರಿದ, ಸಭಾ ಪರ್ವ,1,50
 162.		ಸತ್ಯಮಾರಿ, ಸತ್ಯಹೀನ, ಅರಣ್ಯ ಪರ್ವ,16,19
 163.		ಸತ್ಯವುಳ್ಳರೆ, ಸತ್ಯವಿದ್ದರೆ, ಸಭಾ ಪರ್ವ,1,50
 164.		ಸತ್ಯವ್ಯಪಗತ, ದಿಕ್ಕೆಟ್ಟ, ಅರಣ್ಯ ಪರ್ವ,9,29
 165.		ಸತ್ರಾಣ, ಅಧಿಕಶಕ್ತಿ, ಗದಾ ಪರ್ವ,10,22
 166.		ಸತ್ವ ಸವೆಯದು, ಇಬ್ಬರ ಶಕ್ತಿಯೂ ಕುಗ್ಗದು, ಸಭಾ ಪರ್ವ,2,111
 167.		ಸತ್ವದಸಾರ, ಶಕ್ತಿ ಘನೀಭೂತವಾದ, ಭೀಷ್ಮ ಪರ್ವ,3,18
 168.		ಸತ್ವನಿಧಿ, ಶಕ್ತಿಸಾಮರ್ಥ್ಯಕ್ಕೆ ಆಕರ, ಗದಾ ಪರ್ವ,5,44
 169.		ಸತ್ವಹೀನನನ್ನಾಗಿಸು. ಜರುಹು, ಭೇದಿಸು, ಕರ್ಣ ಪರ್ವ,14,2
 170.		ಸತ್ವೈಕನಿಧಿ, ಸತ್ವಗುಣಕ್ಕೆ, ಗದಾ ಪರ್ವ,11,38
 171.		ಸದರ, ಸುಲಭ, ಆದಿ ಪರ್ವ,15,10
 172.		ಸದರ, ಹಗುರ, ದ್ರೋಣ ಪರ್ವ,1,70
 173.		ಸದೆ, ಬಡಿದು ಹಾಕು, ಆದಿ ಪರ್ವ,14,11
 174.		ಸದೆಗ, ಕ್ಷುದ್ರ, ಕರ್ಣ ಪರ್ವ,2,18, 
 175.		ಸದೆದು, ಸಂಹರಿಸಿ, ಗದಾ ಪರ್ವ,13,13
 176.		ಸದೆದು, ಬಡಿದು , ಗದಾ ಪರ್ವ,9,34
 177.		ಸದೆದುದು, ತಟ್ಟಿತು, ಭೀಷ್ಮ ಪರ್ವ,8,7
 178.		ಸದ್ಧರ್ಮ, ಒಳ್ಳೆಯಧರ್ಮ, ಗದಾ ಪರ್ವ,11,7
 179.		ಸಧಾರತನ, ಶೂರತ್ವ, ಕರ್ಣ ಪರ್ವ,20,5
 180.		ಸಾನಕ, ಶಬ್ದ/ಧ್ವನಿ, ಕರ್ಣ ಪರ್ವ,24,49
 181.		ಸನಾಮ, ಪ್ರಸಿದ್ಧನಾದ, ಆದಿ ಪರ್ವ,4,15
 182.		ಸನಾಮರು, ಸಾರ್ಥಕವಾದ ಹೆಸರುಳ್ಳವರು, ಗದಾ ಪರ್ವ,12,14
 183.		ಸನುಮತ, ಸಮ್ಮತಿ/ಒಪ್ಪಿಗೆ, ಉದ್ಯೋಗ ಪರ್ವ,9,24
 184.		ಸನ್ನಿಭ, ಸಮಾನ , ವಿರಾಟ ಪರ್ವ,10,78
 185.		ಸನ್ನಿಭ, ಸದೃಶ, ಆದಿ ಪರ್ವ,19,34
 186.		ಸನ್ನಿಹಿತ, ಒಳಗೊಂಡ/ಕೂಡಿಕೊಂಡ, ಉದ್ಯೋಗ ಪರ್ವ,4,61
 187.		ಸನ್ನುತ, ಒಳ್ಳೆಯ, ಉದ್ಯೋಗ ಪರ್ವ,7,27
 188.		ಸನ್ನೆ, ಸಂಕೇತ, ಆದಿ ಪರ್ವ,8,76
 189.		ಸನ್ನೆಗಾಳೆಗಳು, ಸೂಚನೆ ನೀಡುವ ಕಹಳೆಗಳು, ದ್ರೋಣ ಪರ್ವ,3,80
 190.		ಸನ್ನೆಯಲಿ, ಸೌಂಜ್ಞೆಯಲ್ಲಿ, ಗದಾ ಪರ್ವ,8,63
 191.		ಸನ್ಮೋಹನ, ಆಕರ್ಷಣೆ, ಆದಿ ಪರ್ವ,12,20
 192.		ಸಪ್ತವಸ್ಯನ, ಜೂಜು , ಸಭಾ ಪರ್ವ,12,89, , ,  ಮಾಂಸ,   ಸ್ತ್ರೀ ವ್ಯಸನ,  ದಂಡ ವಿಘಾತಿ ,   ಅರ್ಥದೂಷಣ., 
 193.		ಸಪ್ತವ್ಯಸನ, ಸ್ತ್ರೀ , ಸಭಾ ಪರ್ವ,1,32, , ,  ಪಾನ ವಾಕ್‍ಪೌರುಷ್ಯ , ದಂಡಪೌರುಷ್ಯ , ಅರ್ಥದೂಷಣ,  
 194.		ಸಪ್ತಾಂಗ, ಏಳು ಅಂಗಗಳು (ಸ್ವಾಮಿ, ಉದ್ಯೋಗ ಪರ್ವ,9,3
 195.		ಸಪ್ರಾಣ, ಪ್ರಾಣವುಳ್ಳವನು, ಗದಾ ಪರ್ವ,7,42
 196.		ಸಪ್ರಾಣಿಸಲಿ, ಚೇತನವನ್ನು ಪಡೆಯಲಿ, ಗದಾ ಪರ್ವ,7,46
 197.		ಸಪ್ರಾಣಿಸು, ಉಸಿರು ಬರುವಂತೆ ಮಾಡು., ವಿರಾಟ ಪರ್ವ,2,19
 198.		ಸಬಳ, ಈಟಿಯಂತಹ ಆಯುಧ, ಶಲ್ಯ ಪರ್ವ,2,24
 199.		ಸಬಳ, ಕೊಂತ, ವಿರಾಟ ಪರ್ವ,4,27
 200.		ಸಬಳಿಗ, ಈಟಿಯಂತಹ ಆಯುಧವನ್ನು ಹಿಡಿದಿರುವವ, ಶಲ್ಯ ಪರ್ವ,2,11
 201.		ಸಬಳಿಗರು, ಈಟಿಕಾರರ ಪಡೆ, ಭೀಷ್ಮ ಪರ್ವ,4,46
 202.		ಸಬ್ಬಗತ, ಸರ್ವಗತ , ಭೀಷ್ಮ ಪರ್ವ,3,67
 203.		ಸಮ, ಶ್ರಮ, ಆದಿ ಪರ್ವ,6,41
 204.		ಸಮ, ಹೊಂದಿಕೆ ಸರಿವು, ಗದಾ ಪರ್ವ,9,4
 205.		ಸಮಂಜಸ, ಸೂಕ್ತವಾದ, ಆದಿ ಪರ್ವ,18,1
 206.		ಸಮಂಜಸ, ಯೋಗ್ಯ , ಗದಾ ಪರ್ವ,11,33
 207.		ಸಮಚಡಿಸಿ, ?, ಸಭಾ ಪರ್ವ,2,95
 208.		ಸಮಚಿತ್ತ, ಸಮಾಧಾನ ಚಿತ್ತ, ಆದಿ ಪರ್ವ,10,35
 209.		ಸಮತಳಿಸು, ಸಮಬಲವಾಗಿ, ಶಲ್ಯ ಪರ್ವ,3,63
 210.		ಸಮತಳಿಸು, ಸರಿಸಮನಿಸು, ಭೀಷ್ಮ ಪರ್ವ,8,42
 211.		ಸಮತಳಿಸು, ನಿರ್ಮಿಸು, ಆದಿ ಪರ್ವ,12,13
 212.		ಸಮತಳಿಸು, ಅಣಿಯಾಗು , ವಿರಾಟ ಪರ್ವ,4,0
 213.		ಸಮತಳಿಸು, ಅಣಿಗೊಳ್ಳು , ವಿರಾಟ ಪರ್ವ,9,13
 214.		ಸಮದಂಡಿ, ಸರಿಸಮರು, ಭೀಷ್ಮ ಪರ್ವ,1,19
 215.		ಸಮದಂಡಿ, ಒಂದೇ ರೀತಿಯಲ್ಲಿ, ಉದ್ಯೋಗ ಪರ್ವ,3,120
 216.		ಸಮನಿಸು, ಉಂಟಾಗು , ವಿರಾಟ ಪರ್ವ,3,58
 217.		ಸಮಪಾಳಿ, ಸರಿಸಮ, ಉದ್ಯೋಗ ಪರ್ವ,6,22
 218.		ಸಮಪಾಳಿ, ಜೊತೆಜೊತೆಗೆ (ಪಾಳಿ, ಗದಾ ಪರ್ವ,4,1
 219.		ಸಮಬೆಸ, ಸಮಕ್ಕೆ ಸಮ ಬೆಸಕ್ಕೆ ಬೆಸ, ದ್ರೋಣ ಪರ್ವ,13,34
 220.		ಸಮಯ, ಸಂದರ್ಶನದ ಭಾಗ್ಯ, ವಿರಾಟ ಪರ್ವ,10,52
 221.		ಸಮಯ ವಿಕಾರ ಭೇದಿ, ಗೊಡ್ಡು ಹರಟೆಯಲ್ಲಿ ಹೊತ್ತು ಕಳೆಯುವವನು, ಉದ್ಯೋಗ ಪರ್ವ,4,47
 222.		ಸಮಯಕೃತ, ಒಡಂಬಡಿಕೆಯಾದುದು, ಗದಾ ಪರ್ವ,5,45
 223.		ಸಮರ ಭೂತಗಳು, ಯುದ್ಧ ಭೂಮಿ ಭೂತಪ್ರೇತಗಣ, ಭೀಷ್ಮ ಪರ್ವ,5,15
 224.		ಸಮರಥ, ಗದಾಪರ್ವದ 9ನೆಯ ಸಂಧಿಯ 9ನೆಯ ಪದ್ಯದ ಟಿಪ್ಪಣಿಯನ, ಶಲ್ಯ ಪರ್ವ,2,15
 225.		ಸಮಸ್ತಪ್ರಕೃತಿಜನ, ಎಲ್ಲ ಜನಸಾಮಾನ್ಯರು, ಗದಾ ಪರ್ವ,12,21
 226.		ಸಮಹಂತಿಗಾರರು, ಆಪ್ತರು, ಅರಣ್ಯ ಪರ್ವ,21,44
 227.		ಸಮಾಖ್ಯಾ, ಕೀರ್ತಿ, ಆದಿ ಪರ್ವ,19,14
 228.		ಸಮಾಗತರು, ಗುಂಪುಗೂಡಿದವÀರು, ಆದಿ ಪರ್ವ,12,21
 229.		ಸಮಾಧಾನದಿಂದ (ಸಾಮ, ಚತುರೋಪಾಯಗಳಲ್ಲಿ ಮೊದಲನೆಯದು , ಗದಾ ಪರ್ವ,11,0
 230.		ಸಮಾಧಿ, ಏಕಾಗ್ರತೆ, ಆದಿ ಪರ್ವ,19,32
 231.		ಸಮಾಧಿ, ಧ್ಯಾನಸ್ಥಿತಿ . ಯೋಗಸ್ಥಿತಿ, ದ್ರೋಣ ಪರ್ವ,7,20
 232.		ಸಮಾರ್ಚನನು, ಚೆನ್ನಾಗಿ ಪೂಜಿಸುವವನು., ದ್ರೋಣ ಪರ್ವ,9,14
 233.		ಸಮಾಸ, ಒಟ್ಟು ಎಲ್ಲ, ಭೀಷ್ಮ ಪರ್ವ,1,55
 234.		ಸಮಾಸಪೂರಿತ, ಸಮೂಹದೊಡಗೂಡಿ, ಅರಣ್ಯ ಪರ್ವ,3,7
 235.		ಸಮಾಸವಿಸ್ತರ, ಸಮಸ್ತ ವಿವರಗಳು, ಭೀಷ್ಮ ಪರ್ವ,1,55
 236.		ಸಮಾಹಿತ, ಸಮಬಲ, ದ್ರೋಣ ಪರ್ವ,4,47
 237.		ಸಮಾಹಿತ, ವ್ಯವಸ್ಥೆಗೊಳಿಸಿದ., ಆದಿ ಪರ್ವ,15,6
 238.		ಸಮಾಹಿತ, ಒಟ್ಟಿಗೆ ಸೇರಿದ, ಉದ್ಯೋಗ ಪರ್ವ,3,72
 239.		ಸಮಿತ್ತು, ಸಮಿಧಾ, ಗದಾ ಪರ್ವ,11,60
 240.		ಸಮಿಧೆ, ಸಮಿತ್ತು, ಗದಾ ಪರ್ವ,1,20
 241.		ಸಮಿಧೆ, ಸಮಿತ್ತು (ಹೋಮದ ಕಟ್ಟಿಗೆ) ಕುಮತಿ, ಆದಿ ಪರ್ವ,8,85
 242.		ಸಮೀರ, ವಾಯು ಭುಜಗರು, ಆದಿ ಪರ್ವ,11,41
 243.		ಸಮೀರಜನನುಜ, ಭೀಮನ ಸೋದರ, ಭೀಷ್ಮ ಪರ್ವ,3,25
 244.		ಸಮೀರನ ಸೂನು, ವಾಯುಪುತ್ರ (ಭೀಮ), ವಿರಾಟ ಪರ್ವ,1,22
 245.		ಸಮೀರÀಸುತ, ವಾಯುವಿನ ಮಗ, ಗದಾ ಪರ್ವ,10,16
 246.		ಸಮೀರಾತ್ಮಜ, ವಾಯುಪತ್ರ, ಗದಾ ಪರ್ವ,7,21
 247.		ಸಮುದ್ಭವ, ಉದ್ಭವ, ಆದಿ ಪರ್ವ,18,3
 248.		ಸಮುದ್ರಘೋಷ, ಸಮುದ್ರದ ಅಲೆಗಳ ಮೊರೆತ., ಗದಾ ಪರ್ವ,5,30
 249.		ಸಮುದ್ರವಿಭವ, ಯಾವಾಗಲೂ ಭರ್ತಿಯಾಗಿರುವ ಸಮುದ್ರದ ವೈಭವ, ಗದಾ ಪರ್ವ,4,18
 250.		ಸಮುದ್ರಸೇನನ, ಸಮುದ್ರ ಸೇನನೆಂಬವನನ್ನು, ಸಭಾ ಪರ್ವ,4,9
 251.		ಸಮೂಹ ಉಪ್ಪರಗುಡಿ, ಮೇಲೆ ಹಾರುವ ಬಾವುಟ, ಶಲ್ಯ ಪರ್ವ,2,34
 252.		ಸಮೂಹ ಸದೆ, ಹೊಡೆ., ಶಲ್ಯ ಪರ್ವ,3,2
 253.		ಹಲ್ಲಣಿಸು, ಜೀನನ್ನು ಕಟ್ಟು ('ಹಲ್ಲಣ'ವೆಂಬ ನಾಮಪದದಿಂದ, ಶಲ್ಯ ಪರ್ವ,2,4
 254.		ಸಮೇಳದ ಮಾತು, ಸಖಿಯರ ಗುಂಪಿನೊಂದಿಗಿನ ಮಾತು, ವಿರಾಟ ಪರ್ವ,5,35
 255.		ಸಮ್ಮದ, ಹಿಗ್ಗು, ಉದ್ಯೋಗ ಪರ್ವ,9,7
 256.		ಸಮ್ಮುಖ, ಎದುರಿಗೆ, ಭೀಷ್ಮ ಪರ್ವ,6,22
 257.		ಸಮ್ಮುಖದ, ಎದುರು ಬಿದ್ದ, ಭೀಷ್ಮ ಪರ್ವ,4,64
 258.		ಸಮ್ಮುಖದ ಅಳವಿ, ಎದುರಿಗೆ ಸಮೀಪದಲ್ಲಿರುವ ನಿಂತಿರುವ, ಭೀಷ್ಮ ಪರ್ವ,3,11
 259.		ಸಮ್ಮುಖನಾದನು, ಇದಿರಾದನು, ಭೀಷ್ಮ ಪರ್ವ,8,34
 260.		ಸಮ್ಮೋಹನ, ವಿಶೇಷ ಆಶೆ, ಗದಾ ಪರ್ವ,5,13
 261.		ಸಮ್ಮೋಹನಾಸ್ತ್ರ, ಇದು ರಸಾಯನ ಯುದ್ಧಕ್ಕೆ ಸಂವಾದಿಯಾದ ಒಂದು ಮಹಾಸ್ತ್ರ. ಇದರ ಪ್ರಭಾವದಿಂದ ಎಲ್ಲರೂ ತಾತ್ಕಾಲಿಕವಾಗಿ ಮೂರ್ಛೆಗೆ ಒಳಗಾಗುತ್ತಾರೆ. ಒಂದು ಪೌರಾಣಿಕ ಅಸ್ತ್ರ. ಮನ್ಮಥನ ಪಂಚಬಾಣಗಳಲ್ಲಿ ಒಂದರ ಹೆಸರು. ಒಂದು ವಶೀಕರಣ ತಂತ್ರಕ್ಕೆ ಸಂಬಂಧಿಸಿದ ಶಬ್ದ, ವಿರಾಟ ಪರ್ವ,8,0
 262.		ಸಮ್ಯಗ್ ಜ್ಞಾನ, ಸಂಪೂರ್ಣ ಜ್ಞಾನ, ಉದ್ಯೋಗ ಪರ್ವ,4,16
 263.		ಸಮ್ಯಜ್ಞಾನಿ, ಸರಿಯಾದ ಜ್ಞಾನ ಉಳ್ಳವನು, ದ್ರೋಣ ಪರ್ವ,1,30
 264.		ಸರಕಟಿಸಿ, ಉತ್ಸಾಹಿಸಿ, ದ್ರೋಣ ಪರ್ವ,18,13
 265.		ಸರಕಟಿಸು, ರಭಸದಿಂದ ನುಗ್ಗು, ಕರ್ಣ ಪರ್ವ,13,12
 266.		ಸರಕು, ಸಾಮಗ್ರಿಗಳು, ಗದಾ ಪರ್ವ,4,13
 267.		ಸರಕು, ಲಕ್ಷ್ಯ, ದ್ರೋಣ ಪರ್ವ,10,43
 268.		ಸರಕು, ಗೌರವ/ಮನ್ನಣೆ, ಉದ್ಯೋಗ ಪರ್ವ,3,110
 269.		ಸರಕು ಮಾಡರು, ಪರಿಗಣಿಸುವವರಲ್ಲ ಜಯವಧು, ಭೀಷ್ಮ ಪರ್ವ,8,66
 270.		ಸರಕು ಮಾಡು, ಅವರನ್ನು ಗಮನಿಸಬೇಕಾದ ಸರಕು (ವಸ್ತು) ಎಂದು ಭಾವಿಸು, ವಿರಾಟ ಪರ್ವ,10,63
 271.		ಸರಟ, ಓತಿ, ಅರಣ್ಯ ಪರ್ವ,4,33
 272.		ಸರವಿ, ಹುಲ್ಲಿನ ಹಗ್ಗ, ದ್ರೋಣ ಪರ್ವ,5,78
 273.		ಸರಸ, ರಸಭರಿತವಾದ, ಆದಿ ಪರ್ವ,16,23
 274.		ಸರಸ, ರಸವತ್ತಾದ, ಆದಿ ಪರ್ವ,13,17
 275.		ಸರಸಿ, ಸರೋವರ., ಗದಾ ಪರ್ವ,3,38
 276.		ಸರಸಿಜಾಕ್ಷಿ, ಕಮಲದಂತೆ ಕಣ್ಣುಳ್ಳವಳು, ಆದಿ ಪರ್ವ,12,2
 277.		ಸರಸಿಜಾನನೆ, ಕಮಲಮುಖಿ, ಆದಿ ಪರ್ವ,11,13
 278.		ಸರಸಿಜಾಯತ, ವಿಸ್ತಾರವಾದ ತಾವರೆ, ವಿರಾಟ ಪರ್ವ,1,28
 279.		ಸರಳ ಸಾರ, ಬಾಣಗಳ ಸಮೂಹ, ವಿರಾಟ ಪರ್ವ,8,35
 280.		ಸರಳ ಸಾರ, ಬಾಣಗಳ ಶ್ರೇಣಿ , ವಿರಾಟ ಪರ್ವ,4,58, ,
 281.		ಸರಳ ಸೊಕ್ಕು, ಸಮ್ಮೋಹನಾಸ್ತ್ರದ ಮತ್ತು, ವಿರಾಟ ಪರ್ವ,8,86
 282.		ಸರಳಕಂಗೈಸುವರೆ, ಇದು ಸರಳಿಗಂಗೈಸುವರೆ (ಮನ್ಮಥನ ಬಾಣಗಳಿಗೆ ದೇಹವನ್ನು ಒಪ್ಪಿಸುತ್ತಾರೆಯೆ ?) ಎಂದಿರಬಹುದೆ ? ದಳ್ಳುರಿ, ವಿರಾಟ ಪರ್ವ,2,35
 283.		ಸರಳಿನ ಹಾಸಿಕೆ, ಶರಶಯನ, ಶಲ್ಯ ಪರ್ವ,1,35, 
 284.		ಸರಳಿಸಿ, ಜಿಗಿದು, ವಿರಾಟ ಪರ್ವ,7,50
 285.		ಸರಳಿಸು, ಓಡಿಬರು , ಗದಾ ಪರ್ವ,5,42
 286.		ಸರಳು, ಬಾಣ್ಲ, ಭೀಷ್ಮ ಪರ್ವ,4,100
 287.		ಸರಾಗ, ಪ್ರೀತಿಯಿಂದ ಕೂಡಿದ, ಅರಣ್ಯ ಪರ್ವ,11,25
 288.		ಸರಿ, ಸುರಿಮಳೆ, ಗದಾ ಪರ್ವ,1,61
 289.		ಸರಿ, ಜಾರು, ಆದಿ ಪರ್ವ,8,76
 290.		ಸರಿ, ಝರಿ, ಕರ್ಣ ಪರ್ವ,20,41
 291.		ಸರಿಗ, ಸಮಾನರಾದ, ಸಭಾ ಪರ್ವ,1,15
 292.		ಸರಿಗಡಿದು, ಸರಿಸಮವಾಗಿ ಕತ್ತರಿಸಿ, ಭೀಷ್ಮ ಪರ್ವ,4,100
 293.		ಸರಿಗಳೆ, ಬಿಟ್ಟು ಹೋಗು, ವಿರಾಟ ಪರ್ವ,6,21
 294.		ಸರಿಗಳೆ, ಗುರುತಿಸು, ಕರ್ಣ ಪರ್ವ,22,41
 295.		ಸರಿದ, ಪ್ರಸಿದ್ಧ ತರುಬು, ಭೀಷ್ಮ ಪರ್ವ,4,35
 296.		ಸರಿದರೆ, ಹಗೆ ಹಿಂಜರಿದರೆ, ಭೀಷ್ಮ ಪರ್ವ,9,2
 297.		ಸರಿನುಡಿ, ಸರಿಸಮನೆಂದು ಭಾವಿಸಿ ಆಡುವ ಮಾತು, ಗದಾ ಪರ್ವ,8,9
 298.		ಸರಿಮಳೆ, ಬಾಣಗಳ ಮಳೆ, ಭೀಷ್ಮ ಪರ್ವ,5,25
 299.		ಸರಿಮಿಗಿಲು, ಸಮಾನತೆಗಿಂತ ಹೆಚ್ಚೆನಿಸಿ., ಭೀಷ್ಮ ಪರ್ವ,9,45
 300.		ಸರಿಯೊರೆಗೆ, ಸಮಸಮವಾಗಿ, ದ್ರೋಣ ಪರ್ವ,5,16
 301.		ಸರಿವಳೆ, ಭಾರಿಯ ಮಳೆ, ವಿರಾಟ ಪರ್ವ,8,24
 302.		ಸರಿವಳೆ, ಸುರಿಮಳೆ, ಭೀಷ್ಮ ಪರ್ವ,6,23
 303.		ಸರಿವಳೆ, ಒಂದೇ ಸಮನೆ ಉಂಟಾಗುವ ಮಳೆ, ದ್ರೋಣ ಪರ್ವ,3,22
 304.		ಸರಿವು, ಮಳೆ, ವಿರಾಟ ಪರ್ವ,8,89
 305.		ಸರಿಸ, ಸಾಲಾಗಿ , ಶಲ್ಯ ಪರ್ವ,3,74, , 
 306.		ಸರಿಸ, ಸರಿಸಮಾನ, ದ್ರೋಣ ಪರ್ವ,15,23
 307.		ಸರಿಸ, ಮುಂಭಾಗ, ಗದಾ ಪರ್ವ,2,14, , 
 308.		ಸರಿಸ, ಉಚಿತ, ಕರ್ಣ ಪರ್ವ,21,9
 309.		ಸರಿಸ ಮತ್ತು ವಿಷಮ, ಸಂಗೀತಶಾಸ್ತ್ರದಲ್ಲಿ ಸೂಚಿಸುವ ತಾಳ ಗತಿಗಳು, ಕರ್ಣ ಪರ್ವ,20,34
 310.		ಸರಿಸಕ್ಕೆ, ಸಮಕ್ಕೆ, ಭೀಷ್ಮ ಪರ್ವ,1,39
 311.		ಸರಿಸಗುಂಡು, ಹತ್ತಿರದ ಗುಂಡು (?), ಭೀಷ್ಮ ಪರ್ವ,4,83
 312.		ಸರಿಸದಲಿ, ಸರಾಗವಾಗಿ, ಸಭಾ ಪರ್ವ,3,30
 313.		ಸರಿಸದಲಿ, ಇದಿರಿನಲಿ, ಭೀಷ್ಮ ಪರ್ವ,9,2
 314.		ಸರಿಸದಲಿ, ಎದುರಿಗೆ ಸರಿಸಮಾನರಾಗಿ, ಭೀಷ್ಮ ಪರ್ವ,4,63
 315.		ಸರಿಹೃದಯನು, ಸಮಾನಹೃದಯನು, ದ್ರೋಣ ಪರ್ವ,1,7
 316.		ಸರೀಸೃಪ, ಉರಗ, ಅರಣ್ಯ ಪರ್ವ,13,42
 317.		ಸರೋವಾರಿ, ಸರೋವರದ ನೀರು, ಆದಿ ಪರ್ವ,4,47
 318.		ಸರ್ಗ, ಸೃಷ್ಟಿ, ಅರಣ್ಯ ಪರ್ವ,8,5
 319.		ಸರ್ಬದಳ, ಸಕಲದಳ, ಶಲ್ಯ ಪರ್ವ,3,52
 320.		ಸರ್ವಗತ, ಅಂತರ್ಯಾಮಿ, ಉದ್ಯೋಗ ಪರ್ವ,4,37
 321.		ಸರ್ವಗತ, ಎಲ್ಲೆಲ್ಲೂ ಇರುವ., ಗದಾ ಪರ್ವ,4,56
 322.		ಸರ್ವಗವತೆಯಲಿ, ಸಂಪೂರ್ಣವಾಗಿ ಸರ್ವಸ್ವವನ್ನು ಅಪಹರಿಸುವ ಮೂಲP, ಸಭಾ ಪರ್ವ,4,9
 323.		ಸರ್ವಥಾ, ಖಂಡಿತವಾಗಿಯೂ, ಆದಿ ಪರ್ವ,9,23
 324.		ಸರ್ವಾಂಗಯಜ್ಞ, ಸಂಪೂರ್ಣ ದೇಹವನ್ನೇ ಅಗ್ನಿಗೊಪ್ಪಿಸುವ ಯಜ್ಞ, ಗದಾ ಪರ್ವ,9,21
 325.		ಸರ್ವಾಪರಾಧಿಗಳು, ಎಲ್ಲ ರೀತಿಯ ಪಾಪಗಳನ್ನು ಮಾಡಿದವರು, ಗದಾ ಪರ್ವ,11,65
 326.		ಸರ್ವಾಪಹಾರ, ಎಲ್ಲರ ಪ್ರಾಣಗಳೂ ಅಪಹಾರವಾದುದು, ಗದಾ ಪರ್ವ,4,10
 327.		ಸರ್ವಾರ್ಥ, ಎಲ್ಲದ್ದಕ್ಕೂ, ಉದ್ಯೋಗ ಪರ್ವ,6,29
 328.		ಸರ್ವಾವಯವ, ಎಲ್ಲ ಅಂಗಗಳೂ, ಗದಾ ಪರ್ವ,11,37
 329.		ಸರ್ಷಪ, ಸಾಸುವೆಕಾಳು, ಆದಿ ಪರ್ವ,14,24
 330.		ಸಲಗ, ಗೂಳಿ, ವಿರಾಟ ಪರ್ವ,7,51
 331.		ಸಲಹು, ಸಾಕು, ಆದಿ ಪರ್ವ,10,15
 332.		ಸಲಹುವನು, ಸಂರಕ್ಷಿಸುವನು, ಭೀಷ್ಮ ಪರ್ವ,7,32
 333.		ಸಲಾಕೆ, ತೆಳುಕಂಬಿ, ಭೀಷ್ಮ ಪರ್ವ,4,18
 334.		ಸಲಿಲ, ನೀರು., ಗದಾ ಪರ್ವ,4,57
 335.		ಸಲಿಲ ಬಾಣದಲಿ, ವಾರುಣಾಸ್ತ್ರದಲ್ಲಿ (ನೀರಿನ ಬಾಣದಿಂದ) ತಪ್ತ ಲೋಹದ ಜಲದವೊಲು, ಭೀಷ್ಮ ಪರ್ವ,10,27
 336.		ಸಲಿಲವಾಸ, ನೀರೊಳಗಿರುವಿಕೆ., ಗದಾ ಪರ್ವ,4,35
 337.		ಸಲಿಲಸ್ತಂಭ, ಜಲಸ್ತಂಭನ, ಗದಾ ಪರ್ವ,5,5
 338.		ಸಲಿಲಸ್ತಂಭವಿದ್ಯೆ, ನೀರೊಳಗೆ ಮುಳುಗಿಯೂ ಬದುಕಿರುವ ಒಂದು ವಿದ್ಯೆ., ಗದಾ ಪರ್ವ,3,41
 339.		ಸಲಿಲಾಂಜಲಿ, ನೀರಿನಿಂದ ಕೊಡುವ ಶ್ರದ್ಧಾಂಜಲಿ (ಸಲಿಲ, ಗದಾ ಪರ್ವ,11,13
 340.		ಸಲಿಸು, ನಡೆಸು , ಗದಾ ಪರ್ವ,10,27
 341.		ಸಲಿಸು, ನಡೆಸಿಕೊಡು, ಗದಾ ಪರ್ವ,11,14
 342.		ಸಲಿಸು, ದಯಪಾಲಿಸು, ಆದಿ ಪರ್ವ,16,60
 343.		ಸಲೆ, ವಿಸ್ತಾರವಾಗಿ, ಉದ್ಯೋಗ ಪರ್ವ,9,79
 344.		ಸಲೆ, ವಿಶೇಷ, ಸಭಾ ಪರ್ವ,1,40
 345.		ಸಲ್ಲದು, ಸೇರದು, ಗದಾ ಪರ್ವ,11,49
 346.		ಸವಗ, ಒಳ ಕವಚ (ಕಾಪು) ಜೋಡು, ಭೀಷ್ಮ ಪರ್ವ,4,67
 347.		ಸವಡಿ, ಎರಡು, ಗದಾ ಪರ್ವ,8,7
 348.		ಸವಡಿ, ಎದುರು, ಅರಣ್ಯ ಪರ್ವ,6,98
 349.		ಸವಡಿ, ಹೆಣ್ಣು ಆನೆ, ಗದಾ ಪರ್ವ,1,49
 350.		ಸವಡಿ ಮಂದರ, ಜೋಡಿ ಪರ್ವತ, ವಿರಾಟ ಪರ್ವ,3,89
 351.		ಸವಡಿಗತ್ತಲೆ, ಎರಡು ವಿಧದ ಕತ್ತಲೆ (ಸÀವಡಿ, ಗದಾ ಪರ್ವ,8,64
 352.		ಸವಡಿಗೋಲು, ಜೋಡಿಬಾಣ, ಆದಿ ಪರ್ವ,18,29
 353.		ಸವನ, ಹೋಮ, ಗದಾ ಪರ್ವ,4,36
 354.		ಸವರಿದನು, ನಾಶಮಾಡಿದನು., ಭೀಷ್ಮ ಪರ್ವ,9,21
 355.		ಸವರಿದನು, ಕೊಂದು ಹಾಕಿದನು, ದ್ರೋಣ ಪರ್ವ,2,70
 356.		ಸವರು, ನಾಶಮಾಡು, ಗದಾ ಪರ್ವ,3,24, 
 357.		ಸವರು, ತರಿದು ಹಾಕು, ಭೀಷ್ಮ ಪರ್ವ,5,8
 358.		ಸವರ್ತುಳ, ದುಂಡಾಗಿರುವ, ಭೀಷ್ಮ ಪರ್ವ,3,77
 359.		ಸವಳ, ಸಬಳ, ಕರ್ಣ ಪರ್ವ,8,13
 360.		ಸವಿ, ಮಾಧುರ್ಯ, ಆದಿ ಪರ್ವ,11,13
 361.		ಸವಿದು, ತಿಂದು, ಉದ್ಯೋಗ ಪರ್ವ,9,14
 362.		ಸವೆ, ಶಕ್ತಿಗುಂದು, ಆದಿ ಪರ್ವ,11,29
 363.		ಸವೆ, ನಾಶವಾಗು, ಭೀಷ್ಮ ಪರ್ವ,8,50
 364.		ಸವೆ, ಕಳೆ, ಆದಿ ಪರ್ವ,10,1
 365.		ಸವೆದನು, ನಿರ್ನಾಮ ಮಾಡಿದ, ಶಲ್ಯ ಪರ್ವ,3,6
 366.		ಸವೆದರು, ಸಿದ್ಧಮಾಡಿದರು, ಉದ್ಯೋಗ ಪರ್ವ,8,4
 367.		ಸವೆದುದು, ಪೂರ್ಣಗೊಂಡವು, ಭೀಷ್ಮ ಪರ್ವ,5,0
 368.		ಸವೆಯೆ, ನಾಶವಾಗಲು, ಗದಾ ಪರ್ವ,3,0
 369.		ಸವೆಸು, ಸಿದ್ಧಮಾಡು, ಆದಿ ಪರ್ವ,8,86
 370.		ಸವೆಸು, ಮಾಡಿಸು., ಉದ್ಯೋಗ ಪರ್ವ,8,64
 371.		ಸವ್ಯ, ವಿರೋಧ, ಗದಾ ಪರ್ವ,11,44
 372.		ಸವ್ಯಕುತ, ಸ್ಪಷ್ಟವಾಗಿ ಒಡೆಮಟ್ಟು, ಉದ್ಯೋಗ ಪರ್ವ,3,137
 373.		ಸವ್ಯಥೆ, ವ್ಯಥೆಯಿಂದ ಕೂಡಿದ, ಗದಾ ಪರ್ವ,7,48
 374.		ಸವ್ಯಾಕುಲ, ಚಿಂತೆಗೊಳಗಾದವನು., ಅರಣ್ಯ ಪರ್ವ,11,8
 375.		ಸಸಿದೆರಳೆ, ಚಿಕ್ಕ ಕ್ಷುದ್ರ ಹುಳು (ಹಣ್ಣುಗಳಲ್ಲಿರುವ ಹುಳು) ವಿಶ್ವಪ್ರಸರರೂಪಿಂಗೆ, ಭೀಷ್ಮ ಪರ್ವ,3,84
 376.		ಸಸಿನಿರು, ಸುಮ್ಮನೆ (ಸಸಿನೆ) ಇರು , ವಿರಾಟ ಪರ್ವ,7,18
 377.		ಸಸಿನೆ, ಕ್ಷೇಮವಾಗಿ., ಕರ್ಣ ಪರ್ವ,7,19
 378.		ಸಹಜಕೆ, ನಿಜದಲ್ಲಿ, ಭೀಷ್ಮ ಪರ್ವ,8,58
 379.		ಸಹದೇವಾಂಕ, ಸಹದೇವ ಎಂಬ ಅಂಕ, ವಿರಾಟ ಪರ್ವ,10,13
 380.		ಸಹಭವ, (ಜತೆಯಲ್ಲಿ ಹುಟ್ಟಿದವ) ಅಣ್ಣ, ವಿರಾಟ ಪರ್ವ,3,97
 381.		ಸಹಭವ, ಸಹೋದರ, ಗದಾ ಪರ್ವ,2,22
 382.		ಸಹಸ, ಸಾಹಸ (ಪ್ರಾಸ ಸೌಕರ್ಯಕ್ಕಾಗಿ ಬದಲಾವಣೆ) ಮರಳಿಚಿ, ವಿರಾಟ ಪರ್ವ,5,16
 383.		ಸಾಂಗ, ಷಡಂಗ, ಆದಿ ಪರ್ವ,15,5
 384.		ಸಾಂಗೋಪಾಂಗ, ಪೂರ್ಣವಾದ, ಆದಿ ಪರ್ವ,7,1
 385.		ಸಾಂಗೋಪಾಂಗ, ಎಲ್ಲ ಅಂಗಗಳಿಂದ ಕೂಡಿದ, ಆದಿ ಪರ್ವ,7,33
 386.		ಸಾಕಾರ, ಆಕಾರವುಳ್ಳÀ, ಆದಿ ಪರ್ವ,13,47
 387.		ಸಾಕಾರಿ, ಆಕಾರವುಳ್ಳದ್ದು, ಆದಿ ಪರ್ವ,13,22
 388.		ಸಾಕಿಕೊಂಡೈ, ಸಲಹಿದೆ, ಭೀಷ್ಮ ಪರ್ವ,10,28
 389.		ಸಾಕ್ಷಾತರ್ಜುನರು, ನೇರವಾಗಿ ಅರ್ಜುನನನಿಗೆ ಸಂಬಂಧಿಸಿದವರು., ಕರ್ಣ ಪರ್ವ,26,15
 390.		ಸಾಗರವೇಲೆ, ಸಮುದ್ರದಗಡಿ, ಗದಾ ಪರ್ವ,13,1
 391.		ಸಾಣೆ, ಸಾಣೆ ಹಿಡಿದು ಹರಿತಗೊಳಿಸಿದ ಆಯುಧ, ಆದಿ ಪರ್ವ,15,45
 392.		ಸಾಣೆ, ತೀಕ್ಷ್ಣ, ಆದಿ ಪರ್ವ,20,40
 393.		ಸಾಣೆವಿಡಿ, ಸಾಣೆಹಿಡಿ , ಗದಾ ಪರ್ವ,7,48
 394.		ಸಾದು, ಸಾದು> ಸಾಂದು , ವಿರಾಟ ಪರ್ವ,3,81
 395.		ಸಾದು, ಒಂದು ಬಗೆಯ ಸುಗಂಧ ದ್ರವ್ಯ, ವಿರಾಟ ಪರ್ವ,10,48
 396.		ಸಾಧಿಸು, ಛಲವನ್ನು ಕಾಯ್ದಿಟ್ಟುಕೊಂಡಿರು, ಅರಣ್ಯ ಪರ್ವ,4,13
 397.		ಸಾಧುಗಳು, ಸಜ್ಜನರು, ಗದಾ ಪರ್ವ,11,5
 398.		ಸಾಧುರವ, ಸಾಧು  ಎಂಬ ಶಬ್ದ., ಗದಾ ಪರ್ವ,7,4
 399.		ಸಾಧುವಾದ, ಒಳ್ಳೆಯ ಮಾತುಗಳು, ಕರ್ಣ ಪರ್ವ,21,18
 400.		ಸಾನುರಾಗ, ವಿಶೇಷ ಪ್ರೇಮ, ಆದಿ ಪರ್ವ,7,73
 401.		ಸಾಪತ್ನರು, ಶತ್ರುಗಳು, ಉದ್ಯೋಗ ಪರ್ವ,3,22
 402.		ಸಾಪೇಕ್ಷ, ಹೊಂದಿಕೊಂಡಿರುವ, ಗದಾ ಪರ್ವ,4,36
 403.		ಸಾಮ, ಸಾಮ ಬುದ್ಧಿಯಿಂದ, ವಿರಾಟ ಪರ್ವ,3,39
 404.		ಸಾಮ, ಚತುರೋಪಾಯಗಳಲ್ಲಿ ಒಂದು, ಉದ್ಯೋಗ ಪರ್ವ,1,10
 405.		ಸಾಮಂತರು, ಅಧೀನರಾಜರು, ಶಲ್ಯ ಪರ್ವ,3,72
 406.		ಸಾಮದಲಿ, ಉಪಾಯದಿಂದ, ಗದಾ ಪರ್ವ,11,0
 407.		ಸಾಮವ, ಶಿಕ್ಷಣ (ಸಾಮು, ವಿರಾಟ ಪರ್ವ,8,16
 408.		ಸಾಮ್ರಾಜ್ಯಕವು, ಚಕ್ರಾಧಿಪತ್ಯವು, ಆದಿ ಪರ್ವ,8,89
 409.		ಸಾಯುಜ್ಯ, ಪರಮಾತ್ಮನಲ್ಲಿ ಐಕ್ಯ, ಗದಾ ಪರ್ವ,1,26
 410.		ಸಾರ, ಸಕಲ, ಆದಿ ಪರ್ವ,16,67
 411.		ಸಾರ, ಮುಖ್ಯ, ಆದಿ ಪರ್ವ,11,40
 412.		ಸಾರ, ತಿರುಳು, ಉದ್ಯೋಗ ಪರ್ವ,4,15
 413.		ಸಾರಣೆ, ಸಾರಿಸು, ಆದಿ ಪರ್ವ,12,10
 414.		ಸಾರಣೆ, ನೆಲಗಾರೆ, ವಿರಾಟ ಪರ್ವ,10,48
 415.		ಸಾರಥಿವ್ರಾತ, ಸಾರಥಿಗಳ ಸಮೂಹ, ಗದಾ ಪರ್ವ,12,21
 416.		ಸಾರಮಣಿ, ಉತ್ತಮ ಮಣಿಗಳಿಂದ ಕೂಡಿದ, ಗದಾ ಪರ್ವ,3,40
 417.		ಸಾರಸಂಗತಿ, ಸಾರವತ್ತಾದ ವಿಚಾರ, ಆದಿ ಪರ್ವ,12,20
 418.		ಸಾರಸತ್ವ, ಶಕ್ತಿಯ ಎಲ್ಲ ಸಾರ, ಗದಾ ಪರ್ವ,7,31
 419.		ಸಾರಹೃದಯ, ಉತ್ತಮ ಹೃದಯವನ್ನುಳ್ಳವನ, ಗದಾ ಪರ್ವ,8,21
 420.		ಸಾರಾಯ, ಸಾರವತ್ತಾದ, ಆದಿ ಪರ್ವ,11,13
 421.		ಸಾರಿ, ಪಗಡೆಕಾಯಿ, ಆದಿ ಪರ್ವ,13,42
 422.		ಸಾರಿ, ಪಗಡೆಯ ದಾಳ (ಪಗಡೆಯಾಡುವಾಗ ಬಳಸುವ ದಾಳ), ವಿರಾಟ ಪರ್ವ,9,19
 423.		ಸಾರಿಯ ನಿವಹ, ಪಗಡೆಗಳು, ವಿರಾಟ ಪರ್ವ,9,12
 424.		ಸಾರಿಸು, ಘೋಷಿಸು, ಉದ್ಯೋಗ ಪರ್ವ,11,11
 425.		ಸಾರು, ಪಕ್ಕಕ್ಕೆ ಹೋಗು, ದ್ರೋಣ ಪರ್ವ,1,56
 426.		ಸಾರು, ದೂರಸರಿ, ಕರ್ಣ ಪರ್ವ,11,35
 427.		ಸಾರುಗು, ಬರುತ್ತದೆ, ಸಭಾ ಪರ್ವ,1,50
 428.		ಸಾರೆನುತ, ಹೋಗು ಎನ್ನುತ್ತ, ಗದಾ ಪರ್ವ,11,52
 429.		ಸಾರೋದ್ಧಾರ, ಮುಖ್ಯ ತತ್ತ್ವಸಾರ, ಭೀಷ್ಮ ಪರ್ವ,3,50
 430.		ಸಾರ್ಗು, ಪ್ರಾಪ್ತವಾಗುತ್ತದೆ, ಸಭಾ ಪರ್ವ,1,50
 431.		ಸಾಲ, ಕಡ, ಆದಿ ಪರ್ವ,10,18
 432.		ಸಾಲಕುರಿದರಿಹಿ, ಕುರಿಗಳನ್ನು ಬಲಿಕೊಟ್ಟು ಯಜ್ಞಗಳನ್ನು ಮಾಡಿದವರು, ಅರಣ್ಯ ಪರ್ವ,7,15
 433.		ಸಾಲಕೊಳಚೆ, ಕೆಸರಾದ ರಕ್ತ, ಭೀಷ್ಮ ಪರ್ವ,10,11
 434.		ಸಾಲಭಂಜಿಕೆ, ಮರದಗೊಂಬೆ, ಸಭಾ ಪರ್ವ,1,11
 435.		ಸಾಲು, ಸಾಕಾಗು, ಆದಿ ಪರ್ವ,20,40
 436.		ಸಾಹಸ ಇಡಿದುದು, ಪುಡಿಪುಡಿಮಾಡಿದುದು., ಶಲ್ಯ ಪರ್ವ,3,13
 437.		ಸಾಹಸಮಲ್ಲ, ಮಹಾಪರಾಕ್ರಮಿ, ಆದಿ ಪರ್ವ,11,36
 438.		ಸಾಹಾಯ್ಯ, ವೇಷ ?, ವಿರಾಟ ಪರ್ವ,1,21
 439.		ಸಾಹಾಯ್ಯ, ಅನುಕೂಲ, ದ್ರೋಣ ಪರ್ವ,9,38
 440.		ಸಾಹಿತ್ಯ, ಸಂಬಂಧ, ಉದ್ಯೋಗ ಪರ್ವ,4,40
 441.		ಸಾಹಿತ್ಯ, ಸಹಚರ್ಯ/ಸಂಬಂಧಿ, ಉದ್ಯೋಗ ಪರ್ವ,4,26
 442.		ಸಾಹಿತ್ಯರೇಖೆ, ಸಾಹಚರ್ಯದಲ್ಲಿ , ಗದಾ ಪರ್ವ,4,31
 443.		ಸಾಳಗ, ಮೇಳ, ಆದಿ ಪರ್ವ,12,20
 444.		ಸಾಳಗ, ರಾಗದ ಹೆಸರು, ಸಭಾ ಪರ್ವ,1,21
 445.		ಸಾಳಗ, ಒಂದು ರಾಗದ ಹೆಸರು, ಸಭಾ ಪರ್ವ,9,36
 446.		ಸಾಳುವ, ಗಿಡುಗ, ಆದಿ ಪರ್ವ,20,53
 447.		ಸಾಳುವ, ಗಿಡುಗ ಆಗಮ(ನ) ವಿದ್ಯೆ(?), ಕರ್ಣ ಪರ್ವ,11,58
 448.		ಸಾಳ್ವ, ಗಿಡುಗ, ಭೀಷ್ಮ ಪರ್ವ,3,16
 449.		ಸಿಂಗಿ, ಉರಿ, ಅರಣ್ಯ ಪರ್ವ,17,18
 450.		ಸಿಂಧ, ದಂಡ ಧ್ವಜ, ಭೀಷ್ಮ ಪರ್ವ,3,19
 451.		ಸಿಂಧ, ಧ್ವಜ, ಶಲ್ಯ ಪರ್ವ,2,22
 452.		ಸಿಂಧ ಮತ್ತು ಸೆಳೆ, ಧ್ವಜ ಮತ್ತು ಧ್ವಜ ಸ್ತಂಭ, ಭೀಷ್ಮ ಪರ್ವ,8,64
 453.		ಸಿಂಧದ, ಬಾವುಟದ, ದ್ರೋಣ ಪರ್ವ,3,50
 454.		ಸಿಂಧೂರ, ಹಣೆಗೆ ಹಚ್ಚಿಕೊಳ್ಳುವ ಕೆಂಪು ವಸ್ತು, ಆದಿ ಪರ್ವ,1,3
 455.		ಸಿಂಪಿಸಿದ, ಎರೆಚಿದ, ದ್ರೋಣ ಪರ್ವ,3,56
 456.		ಸಿಂಹನಾದದಲಿ, ಗರ್ಜಿಸುತ್ತಾ, ಭೀಷ್ಮ ಪರ್ವ,8,34
 457.		ಸಿಕ್ಕಿದ, ಸಿಕ್ಕಿಹೋದ (ಸುಕ್ಕಿದ, ಶಲ್ಯ ಪರ್ವ,1,15
 458.		ಸಿಗುರು, ಗಾಯಮಾಡು, ಕರ್ಣ ಪರ್ವ,17,52
 459.		ಸಿಗುರು, ಚೆಕ್ಕೆ, ಉದ್ಯೋಗ ಪರ್ವ,11,39
 460.		ಸಿಡಿ, ಚಲ್ಲಾಪಿಲ್ಲಿ, ಆದಿ ಪರ್ವ,20,54
 461.		ಸಿಡಿಲೇಳಿಗೆ, ಅಬ್ಬರಿಸುವ ಸಿಡಿಲಿನಿಂತಹ  ಕೂಗು, ವಿರಾಟ ಪರ್ವ,4,41
 462.		ಸಿತ, ಬಿಳಿಯ, ಸಭಾ ಪರ್ವ,1,8
 463.		ಸಿತಗತನ, ಶೌರÀ, ಕರ್ಣ ಪರ್ವ,16,17
 464.		ಸಿತಗರು, ಬಲಿಷ್ಠರು, ಭೀಷ್ಮ ಪರ್ವ,3,9
 465.		ಸಿತಗರು, ಧೂರ್ತರು., ದ್ರೋಣ ಪರ್ವ,16,32
 466.		ಸಿತತುರಗ, ಶ್ವೇತವಾಹನ ಅಂದರೆ ಅರ್ಜುನನ ಹೆಸರು, ವಿರಾಟ ಪರ್ವ,1,23
 467.		ಸಿತತುರಗ, ಬಿಳಿಯ ಕುದುರೆಯನ್ನುಳ್ಳವ, ಗದಾ ಪರ್ವ,11,53
 468.		ಸಿತಪತಾಕೆ, ಬಿಳಿಯಧ್ವಜ, ಉದ್ಯೋಗ ಪರ್ವ,7,8
 469.		ಸಿತಹಯ, ಬಿಳಿಕುದುರೆಯವ, ಕರ್ಣ ಪರ್ವ,8,37
 470.		ಸಿತಾಕ್ಷತಾವಳಿ, ಬಿಳಿಯ ಮಂತ್ರಾಕ್ಷತೆ, ದ್ರೋಣ ಪರ್ವ,6,43
 471.		ಸಿತಾಶ್ವ, ಬಿಳಿಯ ಕುದುರೆ, ಆದಿ ಪರ್ವ,20,20
 472.		ಸಿತಾಶ್ವ, ಅರ್ಜುನ (ಕೃಷ್ಣ), ಕರ್ಣ ಪರ್ವ,9,24
 473.		ಸಿತಾಶ್ವ, ಅರ್ಜುನ., ದ್ರೋಣ ಪರ್ವ,10,9
 474.		ಸಿದ್ಧ, ಸಿದ್ಧಿಯನ್ನು ಪಡೆದವ, ಗದಾ ಪರ್ವ,8,60
 475.		ಸಿದ್ಧಾಂತ, ತತ್ತ್ವ, ಆದಿ ಪರ್ವ,11,12
 476.		ಸಿದ್ಧಿ, ಗುರಿ ಮುಟ್ಟುವುದು., ಉದ್ಯೋಗ ಪರ್ವ,4,54
 477.		ಸಿರಿ, ಶೋಭೆ, ಆದಿ ಪರ್ವ,16,52
 478.		ಸಿರಿ, ಶ್ರೀ(ಸಂ) ಐಶ್ವರ್ಯ, ಗದಾ ಪರ್ವ,11,7
 479.		ಸಿರಿಕರಣದವರು, ಶಾನುಭೋಗರು, ಉದ್ಯೋಗ ಪರ್ವ,9,29
 480.		ಸಿರಿನಾಮ, ಮಂಗಳಕರ ನಾಮಸ್ಮರಣೆ, ಭೀಷ್ಮ ಪರ್ವ,6,44
 481.		ಸಿರಿಮುಡಿ, ಸುಂದರವಾದ ತುರುಬು, ಆದಿ ಪರ್ವ,14,7
 482.		ಸಿರಿಲೋಲ, ಲಕ್ಷ್ಮಿಗೆ ಪ್ರಿಯ, ಸಭಾ ಪರ್ವ,1,1
 483.		ಸಿರಿಲೋಲ, ಶ್ರೀಲೋಲ, ಗದಾ ಪರ್ವ,6,1
 484.		ಸಿಲುಕಿದಡೆ, ಸಿಕ್ಕಿಕೊಂಡರೆ, ಗದಾ ಪರ್ವ,12,7
 485.		ಸಿಲುಕಿದನು, ಸಿಕ್ಕಿ ಬಿದ್ದನು, ಭೀಷ್ಮ ಪರ್ವ,6,24
 486.		ಸಿಲುಕಿದನು, ಸಿಕ್ಕಿಹಾಕಿಕೊಂಡನು, ದ್ರೋಣ ಪರ್ವ,2,73
 487.		ಸಿಲುಕು, ಸೇರಿಸು, ಆದಿ ಪರ್ವ,13,11
 488.		ಸಿವಡು ಸುಂಟಿಗೆ, ಸುಟ್ಟಮಾಂಸ, ಕರ್ಣ ಪರ್ವ,8,42
 489.		ಸೀಕರಿ, ಕರಕಲಾಗುವುದು, ಗದಾ ಪರ್ವ,9,18
 490.		ಸೀಕರಿವೋಗು, ಕಪ್ಪಾಗು, ವಿರಾಟ ಪರ್ವ,3,55
 491.		ಸೀಗುರಿ, ಬೀಸುವ ಸೀಗುರಿ, ಭೀಷ್ಮ ಪರ್ವ,3,15
 492.		ಸೀತಾಳ ಮಳಿಗೆ, ನೆಲೆ ?, ಕರ್ಣ ಪರ್ವ,22,1
 493.		ಸೀದು, ಕಪ್ಪಾಗಿ, ಶಲ್ಯ ಪರ್ವ,1,15
 494.		ಸೀಮಂತಮಣಿ, ಬೈತಲೆಯ ಆಭರಣ, ಆದಿ ಪರ್ವ,13,23
 495.		ಸೀಮಾ ಸನ್ನಿವೇಶ, ಎಲ್ಲೆ ಕಟ್ಟಿನ ಪ್ರದೇಶ, ಆದಿ ಪರ್ವ,20,33
 496.		ಸೀಮೆ, ಪರಿಮಿತಿ, ಆದಿ ಪರ್ವ,18,34
 497.		ಸೀಮೆ, ಮೇರೆ, ಆದಿ ಪರ್ವ,16,35
 498.		ಸೀಮೆ, ಕಟ್ಟಳೆ, ಆದಿ ಪರ್ವ,11,32
 499.		ಸೀರೆ, ಉಡುವ ವಸ್ತ್ರ, ಸಭಾ ಪರ್ವ,12,30
 500.		ಸೀರೆ, ಧೋತ್ರ, ಗದಾ ಪರ್ವ,8,21
 501.		ಸೀವಟ, ಫಲಗಳ ಮಿಶ್ರಣ, ಅರಣ್ಯ ಪರ್ವ,9,20
 502.		ಸೀವರಿಸದ, ಬೇಸರಗೊಳ್ಳದ, ಸಭಾ ಪರ್ವ,14,116
 503.		ಸೀವರಿಸದೆ, ಹಿಮ್ಮೆಟ್ಟದೆ, ಆದಿ ಪರ್ವ,13,5
 504.		ಸೀವರಿಸು, ಅಸಹ್ಯ ಪಡು, ವಿರಾಟ ಪರ್ವ,4,36
 505.		ಸೀವರಿಸು, ಉಪೇಕ್ಷಿಸು, ಅರಣ್ಯ ಪರ್ವ,22,2
 506.		ಸೀವರಿಸು, ತಿರಸ್ಕರಿಸು/ಹಿಂದೆಗೆ, ಕರ್ಣ ಪರ್ವ,24,41
 507.		ಸೀವವು, ಸುಟ್ಟು ಹೋಗುತ್ತದೆ, ದ್ರೋಣ ಪರ್ವ,3,65
 508.		ಸೀವುತಿವೆ, ಸುಟ್ಟುಕರಕಲಾಗುವುದು, ಭೀಷ್ಮ ಪರ್ವ,3,75
 509.		ಸೀಸಕ, ತಲೆ ರಕ್ಷಾ ಕವಚ, ಭೀಷ್ಮ ಪರ್ವ,9,37
 510.		ಸೀಸಕ, ತಲೆಗಾಪು, ಸಭಾ ಪರ್ವ,2,11
 511.		ಸೀಸಕÀ, ಶಿರಸ್ತ್ರ್ತಾಣ, ಗದಾ ಪರ್ವ,5,39
 512.		ಸೀಸಕದ ಕಿಗ್ಗಟ್ಟು, ಶಿರಸ್ತ್ರಾಣದ ಕೆಳಪಟ್ಟಿ, ಭೀಷ್ಮ ಪರ್ವ,4,12
 513.		ಸೀಸವಾಳ, ? ಸೀಸ = ಶೀರ್ಷ, ಕರ್ಣ ಪರ್ವ,19,40
 514.		ಸೀಹದ, ಪ್ರೀತಿಯ, ಉದ್ಯೋಗ ಪರ್ವ,8,20
 515.		ಸೀಳಬಡಿ, ಸೀಳಿ ಹೋಗುವಂತೆ ಹೊಡೆ, ಗದಾ ಪರ್ವ,9,36
 516.		ಸೀಳಿದು, ಸೀಳಿ, ವಿರಾಟ ಪರ್ವ,9,36
 517.		ಸೀಳು ಕಟಾಹ, ಕೊಪ್ಪರಿಗೆ , ಶಲ್ಯ ಪರ್ವ,3,19
 518.		ಸುಂಟಗೆ, ಗುಂಡಿಗೆ, ಕರ್ಣ ಪರ್ವ,19,86
 519.		ಸುಂಟಿಗೆ, ಹೃದಯ, ದ್ರೋಣ ಪರ್ವ,13,53
 520.		ಸುಕರ, ಸುಲಭ, ಉದ್ಯೋಗ ಪರ್ವ,6,13
 521.		ಸುಕರ, ಸರಾಗ, ದ್ರೋಣ ಪರ್ವ,13,18
 522.		ಸುಕರ್ಮದುಷ್ಕರ್ಮ, ಪುಣ್ಯಪಾಪ, ಭೀಷ್ಮ ಪರ್ವ,3,48
 523.		ಸುಕೃತ, ಪುಣ್ಯ , ಗದಾ ಪರ್ವ,4,39
 524.		ಸುಕೃತ, ಪುಣ್ಯ, ಗದಾ ಪರ್ವ,3,28
 525.		ಸುಕೃತ, ಪುಣ್ಯಕಾರ್ಯ, ಸಭಾ ಪರ್ವ,1,72
 526.		ಸುಕೃತ, ಪುಣ್ಯೋದಯ, ಆದಿ ಪರ್ವ,16,39
 527.		ಸುಕೃತ, ಒಳ್ಳೆಯ, ಉದ್ಯೋಗ ಪರ್ವ,4,96
 528.		ಸುಕೃತ ಫಲ, ಪುಣ್ಯದ ಫಲ, ವಿರಾಟ ಪರ್ವ,3,11
 529.		ಸುಕೃತಾವಳಿ, ಪುಣ್ಯ ಸಮೂಹ, ವಿರಾಟ ಪರ್ವ,3,11
 530.		ಸುಕೃತಿ, ಪುಣ್ಯವಂತ, ಉದ್ಯೋಗ ಪರ್ವ,3,123
 531.		ಸುಕೃತಿಗಳು, ಪುಣ್ಯಶಾಲಿಗಳೂ, ಸಭಾ ಪರ್ವ,1,91
 532.		ಸುಕ್ಕಿತು, ಮುದುಡು, ಕರ್ಣ ಪರ್ವ,16,27
 533.		ಸುಕ್ಕಿತು, ಕುಗ್ಗಿತು, ಶಲ್ಯ ಪರ್ವ,3,77
 534.		ಸುಕ್ಕಿಸಿ, ಮಂಕುಗೊಳಿಸಿ, ವಿರಾಟ ಪರ್ವ,7,51
 535.		ಸುಖಾಯ, ಯೋಗ್ಯ ಪ್ರಮಾಣ (?) (ಕನ್ನಡ ನಿಘಂಟುಗಳಲ್ಲಿ ಈ ಪದ ಇಲ್ಲ ಕುವ್ಯಾನಿಘಂಟು ಎನ್. ಕೆಯಲ್ಲಿ ಮಾತ್ರ ಈ ಅರ್ಥವಿದೆ), ಭೀಷ್ಮ ಪರ್ವ,4,30
 536.		ಸುಗಂಧ, ಪರಿಮಳ, ಆದಿ ಪರ್ವ,14,3
 537.		ಸುಗಂಧಾನಿಲ, ಪರಿಮಳಭರಿತವಾದಗಾಳಿ, ಆದಿ ಪರ್ವ,11,22
 538.		ಸುಗತಿ, ಸದ್ಗತಿ, ದ್ರೋಣ ಪರ್ವ,5,18
 539.		ಸುಗಮಗಾನಿ, ಸರಳವಾಗಿ ಹಾಡುವವರು, ಸಭಾ ಪರ್ವ,1,89
 540.		ಸುಗುಡತನ, ಬಯಕೆ, ಅರಣ್ಯ ಪರ್ವ,14,2
 541.		ಸುಘಾಯ, ಏಟಿನ ಮೇಲೆ ಏಟು ಬಿದ್ದು ಆದ ಗಾಯ, ಭೀಷ್ಮ ಪರ್ವ,4,44
 542.		ಸುಚರಿತ, ಉತ್ತಮ ಚಾರಿತ್ರ್ಯವುಳ್ಳ, ಗದಾ ಪರ್ವ,11,5
 543.		ಸುಜನರನು, ಒಳ್ಳೆಯವರನ್ನು, ಸಭಾ ಪರ್ವ,1,27
 544.		ಸುಜನರು, ಒಳ್ಳೆಯ ಮನುಷ್ಯರು, ಆದಿ ಪರ್ವ,8,26
 545.		ಸುಜನರು, ಒಳ್ಳೆಯವರು, ದ್ರೋಣ ಪರ್ವ,1,6
 546.		ಸುಜನವ್ರಾತಕಾಶ್ರಯ, ಸಜ್ಜನರಿಗೆ ನೆರಳನ್ನು ಕೊಡುತ್ತಿದೆ (ಅಂದರೆ ನಮ್ಮಂಥವರಿಗೆ ಆಶ್ರಯಕೊಡುತ್ತಿದೆ ಎಂದರ್ಥ), ವಿರಾಟ ಪರ್ವ,3,23
 547.		ಸುಡುಗಾಡಲಿ, ಪರೇತ ವನದಲ್ಲಿ, ವಿರಾಟ ಪರ್ವ,3,82
 548.		ಸುತನಿಧಿ, ಮಕ್ಕಳೆಂಬ ಐಶ್ವರ್ಯ, ಶಲ್ಯ ಪರ್ವ,1,4
 549.		ಸುತಶೋಕ, ಮಕ್ಕಳನ್ನು ಕಳೆದುಕೊಂಡ ಶೋಕ, ಗದಾ ಪರ್ವ,11,73
 550.		ಸುತಿ, ವೇದ (ಸುತಿ<ಶ್ರುತಿ), ವಿರಾಟ ಪರ್ವ,10,69
 551.		ಸುತ್ತ ಬಳಸೆವು, ಲೋಕಾಭಿರಾಮವಾದ ಮಾತುಗಳನಾಡುವುದಿಲ್ಲ ನೇರವಾಗಿ ವಿಚಾರಕ್ಕೆ ಬರುತ್ತೇನೆ ಎಂದರ್ಥ, ವಿರಾಟ ಪರ್ವ,1,18
 552.		ಸುತ್ತುವಲಗೆ, ರಥದ ಗೋಲಾಕಾರದ ಹಲಗೆ, ಗದಾ ಪರ್ವ,1,8
 553.		ಸುತ್ರಾಮ, ದೇವೇಂದ್ರ, ಕರ್ಣ ಪರ್ವ,12,17
 554.		ಸುತ್ರಾಮ ರಿಪುಗಳು, ದೇವೇಂದ್ರನ ವ್ಶೆರಿಗಳು, ಗದಾ ಪರ್ವ,12,14
 555.		ಸುದತಿ, ಮಹಿಳೆ, ಗದಾ ಪರ್ವ,11,46
 556.		ಸುದತಿ, ಮಡದಿ, ಉದ್ಯೋಗ ಪರ್ವ,9,78
 557.		ಸುದತಿ, ಒಳ್ಳೆಯ ಹಲ್ಲುವಳು, ಆದಿ ಪರ್ವ,16,28
 558.		ಸುದತಿ, ಹೆಂಗಸು, ವಿರಾಟ ಪರ್ವ,9,24
 559.		ಸುದತಿಯರು, ಹೆಂಡಿರು, ಗದಾ ಪರ್ವ,12,10
 560.		ಸುಧಾಕರುಣಾವಧಾನ, ಕರುಣಾಮೃತದ ನೋಟ, ಗದಾ ಪರ್ವ,5,52
 561.		ಸುಧಾತ್ರಿ, ಪವಿತ್ರ ಭೂಮಿ, ಉದ್ಯೋಗ ಪರ್ವ,4,54
 562.		ಸುಧಾದೀಧಿತಿ, ಚಂದ್ರನ ದೀಪ್ತಿ, ದ್ರೋಣ ಪರ್ವ,17,13
 563.		ಸುನಾಸಾಲಂಬಿತ, ದೀರ್ಘವಾದ ಉಸಿರು, ಗದಾ ಪರ್ವ,10,12
 564.		ಸುಪೈಕದೊಳು, ಅವರ ಪೈಕಿಯೇ, ಸಭಾ ಪರ್ವ,10,43
 565.		ಸುಪ್ರಣಿತಾಗ್ನಿ, ? ಆಹವನೀಯಾಗ್ನಿ, ಸಭಾ ಪರ್ವ,7,31
 566.		ಸುಪ್ರೇಮನು, ಬಹಳ ಪ್ರೀತಿಯುಳ್ಳವನು  (ವ್ಯಂಗ್ಯದಿಂದ ಹೇಳಿರುವ ಮಾತು) ಮೋಹ, ಗದಾ ಪರ್ವ,11,39
 567.		ಸುಬಲ, ಉತ್ತಮ ಶಕ್ತಿ ಸಾಮಥ್ರ್ಯ, ಗದಾ ಪರ್ವ,13,11
 568.		ಸುಬಲಜೆ, ಸು¨ಲ ರಾಜನ ಮಗಳು, ಗದಾ ಪರ್ವ,11,64
 569.		ಸುಬಲನಂದನ, ಸುಬಲರಾಜನ ಮಗ ಶಕುನಿ, ಗದಾ ಪರ್ವ,2,31
 570.		ಸುಬಲನಂದನೆ, ಸುಬಲರಾಜನ ಮಗಳು, ಗದಾ ಪರ್ವ,11,71
 571.		ಸುಬ್ರಾಹ್ಮ್ಯ, ಬ್ರಾಹ್ಮೀ ಮುಹೂರ್ತ (ದಿನದ ಆರಂಭ ಭಾಗ) ಸಂಧ್ಯಾಮಠ, ಆದಿ ಪರ್ವ,10,6
 572.		ಸುಭಟ ಜೀವನದ ಅಳವುಳಿಗ, ವೀರರ ಬದುಕನ್ನು ನಾಶಪಡಿಸುವಾತ, ವಿರಾಟ ಪರ್ವ,7,34
 573.		ಸುಭಟ ನಿಧಾನರು, ಶೂರರಲ್ಲಿ ಮೇಲಾದವರು, ಭೀಷ್ಮ ಪರ್ವ,8,67
 574.		ಸುಭಟವ್ರಜ, ವೀರರ ಸಮೂಹ, ಸಭಾ ಪರ್ವ,1,37
 575.		ಸುಭಟೌಘ, ಸುಭಟರ ಸಮೂಹ, ಗದಾ ಪರ್ವ,8,26
 576.		ಸುಮನೋಹರ, ಅತ್ಯಂತ ಚೆಲುವು, ಆದಿ ಪರ್ವ,13,15
 577.		ಸುಮುಕ್ತಾಫಲ, ಮುತ್ತಿನಸಾಲು, ಭೀಷ್ಮ ಪರ್ವ,3,77
 578.		ಸುಮುಖ, ಹಸನ್ಮುಖ, ಗದಾ ಪರ್ವ,5,57
 579.		ಸುಮ್ಮಾನ, ಸಂತೋಷಾತಿರೇಕ , ಗದಾ ಪರ್ವ,4,53
 580.		ಸುಯಿದಾನ, ರಕ್ಷಣೆ, ಉದ್ಯೋಗ ಪರ್ವ,3,50
 581.		ಸುಯಿಧಾನ, ಮೇಲ್ವಿಚಾರಣೆ, ಭೀಷ್ಮ ಪರ್ವ,4,1
 582.		ಸುಯಿಧಾನ, ಕಾವಲು, ಗದಾ ಪರ್ವ,2,1
 583.		ಸುಯಿಲು, ನಿಟ್ಟುಸಿರು, ವಿರಾಟ ಪರ್ವ,2,53
 584.		ಸುಯಿಲು, ಒರಗು, ಉದ್ಯೋಗ ಪರ್ವ,3,61
 585.		ಸುಯ್ದಾನ, ಎಚ್ಚರಿಕೆ, ಆದಿ ಪರ್ವ,18,16
 586.		ಸುಯ್ದಾನದಲಿ, ಎಚ್ಚರಿಕೆಯಿಂದ, ಸಭಾ ಪರ್ವ,6,14
 587.		ಸುಯ್ದು, ನಿಟ್ಟುಸಿರು ಬಿಟ್ಟು, ಆದಿ ಪರ್ವ,10,9
 588.		ಸುಯ್ವ, ಧೀರ್ಘವಾಗಿ ಉಸಿರುಬಿಡುವ, ಗದಾ ಪರ್ವ,3,14
 589.		ಸುಯ್ವವನ, ಏದುಸಿರು ಬಿಡುವವನನ್ನು, ಗದಾ ಪರ್ವ,3,12
 590.		ಸುರ, ನರ, ಗದಾ ಪರ್ವ,4,6
 591.		ಸುರಂಗದ, ಆಕರ್ಷಕರಂಗಿನ, ಭೀಷ್ಮ ಪರ್ವ,4,41
 592.		ಸುರಂಭ, ಚೆಲುವು, ವಿರಾಟ ಪರ್ವ,6,1
 593.		ಸುರಗಂಗೆ, ದೇವಗಂಗಾನದಿ, ಭೀಷ್ಮ ಪರ್ವ,4,6
 594.		ಸುರಗಿ, ಕಠಾರಿ, ದ್ರೋಣ ಪರ್ವ,15,19
 595.		ಸುರಗಿ, ಕೈಕತ್ತಿ, ಉದ್ಯೋಗ ಪರ್ವ,11,7
 596.		ಸುರಗಿ, ಚೂರಿ, ಉದ್ಯೋಗ ಪರ್ವ,11,16
 597.		ಸುರಗಿಯ ಬಸೆಯ ಬೆಳಸುತ, ಸುರಗಿ ಕತ್ತಿಗಳಿಗೆ ನೆಣವನ್ನು ಹೆಚ್ಚಾಗಿ ಬಳೆವುದು ?, ಭೀಷ್ಮ ಪರ್ವ,5,38
 598.		ಸುರಗಿಯತಿಬಲರು, ಅತಿಬಲರಾದ ಖಡ್ಗವೀರರು., ಭೀಷ್ಮ ಪರ್ವ,4,24
 599.		ಸುರತರುಣಿಯರು, ದೇವತಾ ಸ್ತ್ರೀಯರು., ಗದಾ ಪರ್ವ,2,31
 600.		ಸುರತವಿರಹಿ, ಕಾಮಬಾಧಿತ ವಿರಹಿ, ವಿರಾಟ ಪರ್ವ,2,50
 601.		ಸುರನದೀಸುತ, ಗಂಗಾಪುತ್ರ ಭೀಷ್ಮ, ಭೀಷ್ಮ ಪರ್ವ,7,6
 602.		ಸುರನಿಕರ, ದೇವ ಸಮೂಹ, ವಿರಾಟ ಪರ್ವ,1,15
 603.		ಸುರಪ, ದೇವತೆಗಳ ಒಡೆಯ, ಆದಿ ಪರ್ವ,20,26
 604.		ಸುರಪನ, ಇಂದ್ರನ, ದ್ರೋಣ ಪರ್ವ,7,32
 605.		ಸುರಪನ ಸೂನು, ಇಂದ್ರನ ಮಗ (ಅರ್ಜುನ), ವಿರಾಟ ಪರ್ವ,6,0
 606.		ಸುರಪನರಸಿ, ಇಂದ್ರನ ಅರಸಿ , ವಿರಾಟ ಪರ್ವ,1,23
 607.		ಸುರಭಿ, ಧೇನು/ಹಸು, ಉದ್ಯೋಗ ಪರ್ವ,7,5
 608.		ಸುರಭಿತನ, ಪರಿಮಳಿಸುವಿಕೆ, ವಿರಾಟ ಪರ್ವ,10,83
 609.		ಸುರರಾಜಸುತ, ಅರ್ಜುನ (ಇಂದ್ರನ ಮಗ), ವಿರಾಟ ಪರ್ವ,8,36
 610.		ಸುರಲತೆ, ಕಲ್ಪಲತೆ, ದ್ರೋಣ ಪರ್ವ,4,48
 611.		ಸುರವ್ರಜ, ದೇವತೆಗಳ ಸಮೂಹ, ಶಲ್ಯ ಪರ್ವ,3,71
 612.		ಸುರಸನ್ನಿಭ, ದೇವಸಮಾನವಾದ, ಸಭಾ ಪರ್ವ,12,82
 613.		ಸುರಸ್ತೋಮ, ದೇವತೆಗಳ ಗುಂಪು, ವಿರಾಟ ಪರ್ವ,10,68
 614.		ಸುರಾರಿ, ರಕ್ಕಸ, ಆದಿ ಪರ್ವ,10,36
 615.		ಸುರಿದು, ಹೀರಿಕೊಂಡು, ಶಲ್ಯ ಪರ್ವ,2,28
 616.		ಸುರಿದುದು, ಹೊರಹಾಕಿತು, ಭೀಷ್ಮ ಪರ್ವ,8,0
 617.		ಸುರಿವೆನು, ಸುರ್ರೆಂದು ಕುಡಿಯುವೆನು, ಭೀಷ್ಮ ಪರ್ವ,10,36
 618.		ಸುರೇಖರು, ಅಂಗಸೌಷ್ಠವವುಳ್ಳವರು (ಶಕ್ತರು), ಭೀಷ್ಮ ಪರ್ವ,9,33
 619.		ಸುರೇಶ, ದೇವೇಂದ್ರ, ಆದಿ ಪರ್ವ,20,25
 620.		ಸುರೇಶ್ವರ, ದೇವತೆಗಳಿಗೆಲ್ಲ ಒಡೆಯ, ಆದಿ ಪರ್ವ,20,31
 621.		ಸುಲಿ, ಸೆಳೆ/ಎಳೆ, ಉದ್ಯೋಗ ಪರ್ವ,5,6
 622.		ಸುಲಿ, ವಸೂಲು ಮಾಡು, ವಿರಾಟ ಪರ್ವ,9,9
 623.		ಸುಲಿಪಲ್ಲು, ಸ್ವಚ್ಛವಾದ ಹಲ್ಲು, ಸಭಾ ಪರ್ವ,14,46
 624.		ಸುಲಿಸೀರೆಯಲಿ, ಸೀರೆಯನ್ನು ಸೆಳೆಯುವ ಸಂದರ್ಭದಲ್ಲಿ, ಗದಾ ಪರ್ವ,11,4
 625.		ಸುಲಿಸು, ಬಿಡಿಸು, ಗದಾ ಪರ್ವ,5,12
 626.		ಸುಲೋಚನ, ಚಂದ್ರ ವಂಶದ ಒಬ್ಬ ರಾಜ, ದ್ರೋಣ ಪರ್ವ,8,49
 627.		ಸುವರ್ಣ, ಸ್ವರ್ಣ, ಗದಾ ಪರ್ವ,13,18
 628.		ಸುವರ್ಣಾಪಳಿ, ಹಳದಿ ವಸ್ತ್ರ  ಸಂಧ್ಯಾಪಳಿ, ಭೀಷ್ಮ ಪರ್ವ,4,52
 629.		ಸುವಾಸಿನಿ, ಸುಮಂಗಲಿ, ಆದಿ ಪರ್ವ,13,27
 630.		ಸುವಿವೇಕಗತಿ, ಉತ್ತಮವಾದ ವಿವೇಕದಿಂದ ದೊರಕುವ ಅಂತಿಮ ಸ್ಥಿತಿ, ಗದಾ ಪರ್ವ,11,12
 631.		ಸುವಿಹ್ವಲಕರಣರು, ವಿಹ್ವಲಗೊಂಡ ಮನಸ್ಸಿನವರು., ಗದಾ ಪರ್ವ,9,38
 632.		ಸುವೃಷ್ಟಿ, ಒಳ್ಳೆಯ ಮಳೆ, ಉದ್ಯೋಗ ಪರ್ವ,4,60
 633.		ಸುಶರ್ಮ, ತ್ರಿಗರ್ತ ದೇಶಾಧಿಪತಿ (ಈಗಿನ ಪಾಕಿಸ್ತಾನದ ಲಾಹೋರ್‍ನಲ್ಲಿರುವ ಜಲಂಧರ್), ಕರ್ಣ ಪರ್ವ,15,4
 634.		ಸುಷುಪ್ತಿ, ಅರೆಪ್ರಜ್ಞಾವಸ್ಥೆ., ದ್ರೋಣ ಪರ್ವ,9,5
 635.		ಸುಷುಮ್ನಾನಾಡಿ, ಸೂರ್ಯ ಚಂದ್ರನಾಡಿಗಳ ಮಧ್ಯದಲ್ಲಿರುವ ನಾಳವೇ ಸುಷುಮ್ನಾನಾಡಿ, ದ್ರೋಣ ಪರ್ವ,18,69
 636.		ಸುಸಂಗತ, ಒಳ್ಳೆಯ, ಆದಿ ಪರ್ವ,11,22
 637.		ಸುಸಂಚ, ರಹಸ್ಯ, ಗದಾ ಪರ್ವ,6,23
 638.		ಸುಸ್ವರ, ಇಂಪಾದ ಧ್ವನಿ, ಆದಿ ಪರ್ವ,11,22
 639.		ಸುಹೃತ್ಸಂತತಿ, ಒಳ್ಳೆಯ ಮಕ್ಕಳು, ಉದ್ಯೋಗ ಪರ್ವ,4,113
 640.		ಸುಳಿ, ಬಾಳೆಗಿಡದಲ್ಲಿ ಸುರುಳಿಯಾಗಿ ಸುತ್ತಿಕೊಂಡಿರುವ ಚಿಗುರೆಲೆ, ದ್ರೋಣ ಪರ್ವ,12,29
 641.		ಸುಳಿ, ತಿರುಗುವುದು, ಆದಿ ಪರ್ವ,20,37
 642.		ಸುಳಿನಾಭಿ, ಸುಳಿಯಾಕಾರದ ಹೊಕ್ಕಳು, ಭೀಷ್ಮ ಪರ್ವ,3,77
 643.		ಸುಳಿವು, ಸೂಚನೆ, ವಿರಾಟ ಪರ್ವ,7,1
 644.		ಸುಳಿವು, ಸಂಚಾರ, ಆದಿ ಪರ್ವ,19,28
 645.		ಸುಳಿವು, ಗುರುತು, ಗದಾ ಪರ್ವ,1,65
 646.		ಸುಳಿವು, ತಿರುಗಾಟ, ಆದಿ ಪರ್ವ,16,15
 647.		ಸುಳಿವುದು, ಸೃಷ್ಟಿ ಆಗುವುದು, ಭೀಷ್ಮ ಪರ್ವ,3,86
 648.		ಸುಳಿಸಿದನು, ಮುನ್ನಡೆಸಿದನು, ಭೀಷ್ಮ ಪರ್ವ,3,3
 649.		ಸೂಕರನ ತುಪ್ಪ, ಹಂದಿಕೊಬ್ಬು, ಭೀಷ್ಮ ಪರ್ವ,5,42
 650.		ಸೂಕ್ತಿ, ಒಳ್ಳೆಯ ಮಾತುಗಳು, ಉದ್ಯೋಗ ಪರ್ವ,6,0
 651.		ಸೂಕ್ಮ, ನಿಖರವಾದ, ಉದ್ಯೋಗ ಪರ್ವ,3,87
 652.		ಸೂಗರಿಸು, ತೂಕಡಿಸು, ಕರ್ಣ ಪರ್ವ,11,30
 653.		ಸೂಚಿಯಗ್ರಪ್ರಮಿತ, ಸೂಜಿಯ ತುದಿಯನ್ನು ಊರುವಷ್ಟು ಅಳತೆಯ (ಪ್ರಮಿತ, ಗದಾ ಪರ್ವ,5,16
 654.		ಸೂಚಿಸು, ಗಮನಕ್ಕೆ ತರು, ಆದಿ ಪರ್ವ,8,81
 655.		ಸೂಚ್ಯಾಗ್ರಸಮ್ಮಿತ, ಸೂಜಿಯ ತುದಿಯಷ್ಟು, ಗದಾ ಪರ್ವ,8,8
 656.		ಸೂಟಿ, ಚುರುಕು, ಉದ್ಯೋಗ ಪರ್ವ,3,104
 657.		ಸೂಠಿ, ವೇಗ, ಗದಾ ಪರ್ವ,1,47
 658.		ಸೂಠಿಯಲಿ, ವೇಗದಲ್ಲಿ, ದ್ರೋಣ ಪರ್ವ,3,45
 659.		ಸೂಡುದರಿ, ಹುಲ್ಲನ್ನು ಕತ್ತರಿಸು, ಕರ್ಣ ಪರ್ವ,19,30
 660.		ಸೂತ, ಸಾರಥಿ `ತಾಯೆ.... ಸೂತನ ತಾ' ಶಬ್ದಗಳು ಮೂಡಿರುವ ಸೊಬಗನ್ನು ನೋಡಿ, ವಿರಾಟ ಪರ್ವ,5,32
 661.		ಸೂತ ಕುನ್ನಿಗಳು, ಸಾರಥಿಗಳು, ಭೀಷ್ಮ ಪರ್ವ,8,63
 662.		ಸೂತಕ, ಮೈಲಿಗೆ, ಅರಣ್ಯ ಪರ್ವ,5,22
 663.		ಸೂತಜ, ಸೂತಪುತ್ರ ಕರ್ಣ, ಗದಾ ಪರ್ವ,11,5
 664.		ಸೂತತನ, ಸಾರಥಿತನ, ವಿರಾಟ ಪರ್ವ,6,15
 665.		ಸೂತರ ಓಜೆಗಳು, ಸಾರಥಿಗಳ ಸಮೂಹ, ಭೀಷ್ಮ ಪರ್ವ,2,5
 666.		ಸೂತಾಶ್ರಯ, ಸಾರಥಿಗಳು ಏರಿದ್ದ, ಭೀಷ್ಮ ಪರ್ವ,4,95
 667.		ಸೂತ್ರಧಾರೆ, ನಿರ್ದೇಶನ, ಆದಿ ಪರ್ವ,18,5
 668.		ಸೂತ್ರಿಸಿ, ಪೋಣಿಸಿ, ಆದಿ ಪರ್ವ,12,15
 669.		ಸೂನಗಿ, ಶೂಲ, ಕರ್ಣ ಪರ್ವ,19,89
 670.		ಸೂನಗೆ, ಶೂಲ, ಅರಣ್ಯ ಪರ್ವ,18,29
 671.		ಸೂನಗೆ, ಶೂಲದ, ಭೀಷ್ಮ ಪರ್ವ,4,94
 672.		ಸೂನಗೆ, ಶೂಲದಂಥ ಆಯುಧ, ಭೀಷ್ಮ ಪರ್ವ,4,65
 673.		ಸೂನಿಗೆ, ಮಾರಕಾಸ್ತ್ರ, ಉದ್ಯೋಗ ಪರ್ವ,11,17
 674.		ಸೂನಿಗೆ, ಒಂದು ಬಗೆ ಕತ್ತಿ, ಭೀಷ್ಮ ಪರ್ವ,3,19
 675.		ಸೂನಿಗೆ, ಒಂದು ಬಗೆಯ ಆಯುಧ, ದ್ರೋಣ ಪರ್ವ,3,5
 676.		ಸೂನಿಗೆ, ಕಠಾರಿ, ಶಲ್ಯ ಪರ್ವ,2,44
 677.		ಸೂನು, ಮಗ., ವಿರಾಟ ಪರ್ವ,1,8
 678.		ಸೂಪ, ಸಾರು, ಆದಿ ಪರ್ವ,10,17
 679.		ಸೂಪ, ಸಾರು , ಆದಿ ಪರ್ವ,15,7
 680.		ಸೂಪಕಾರ, > ಸೂವಾರ> ಸುವಾರ, ವಿರಾಟ ಪರ್ವ,3,38
 681.		ಸೂಪಶಾಸ್ತ, ಪಾಕಶಾಸ್ತ್ರ (ಅಡುಗೆ ವಿದ್ಯೆ), ಉದ್ಯೋಗ ಪರ್ವ,3,92
 682.		ಸೂರಿ ಸಂದೋಹ, ವಿದ್ವಾಂಸರ ಸಮೂಹ, ವಿರಾಟ ಪರ್ವ,10,69
 683.		ಸೂರುಳ್, ಪ್ರತಿಜ್ಞೆ, ಉದ್ಯೋಗ ಪರ್ವ,3,112
 684.		ಸೂರುಳಿಸು, ಸೂರುಳ್ ಪ್ರತಿಜ್ಞೆ ಮಾಡು, ವಿರಾಟ ಪರ್ವ,9,35
 685.		ಸೂರೆ, ಸೂರೆ ಹೊಡೆಯುವುದು, ಗದಾ ಪರ್ವ,5,18
 686.		ಸೂರೆಗಳ, ಗಂಟು ಮೂಟೆಗಳ, ಭೀಷ್ಮ ಪರ್ವ,7,8
 687.		ಸೂರೆಗೆಳಸು, ಲೂಟಿ ಮಾಡ ಬಯಸು, ಆದಿ ಪರ್ವ,13,31
 688.		ಸೂರೆಗೊಂಡು, ಅಲ್ಲಿನವರನ್ನೆಲ್ಲ ಸೂರೆಮಾಡಿದ ಮೇಲೆ, ಸಭಾ ಪರ್ವ,4,8
 689.		ಸೂರೆಯ ಕೈತವಕಿಗಳು, ?, ಸಭಾ ಪರ್ವ,1,2
 690.		ಸೂರೆವೋಗು, ದಾಳಿಗೆ ಒಳಗಾಗು, ವಿರಾಟ ಪರ್ವ,2,10
 691.		ಸೂರ್ಯನ ತುರಗ, ಸೂರ್ಯನ ರಥದ ಏಳು ಕುದುರೆಗಳು, ಗದಾ ಪರ್ವ,8,43
 692.		ಸೂಲಿಗೆ, ಶೂಲ, ದ್ರೋಣ ಪರ್ವ,3,7
 693.		ಸೂವಾರ ವಿದ್ಯೆ, ಅಡಿಗೆಯ ಕಲೆ, ವಿರಾಟ ಪರ್ವ,3,38
 694.		ಸೂಸಕ, ಬೈತಲೆಮಣಿ, ಗದಾ ಪರ್ವ,11,19
 695.		ಸೂಸಿ, ಚೆಲ್ಲಿ, ಆದಿ ಪರ್ವ,15,41
 696.		ಸೂಸಿತು, ತುಂಬಿತು, ಗದಾ ಪರ್ವ,12,5
 697.		ಸೂಸಿದರು, ಸುರಿಸಿದರು, ಭೀಷ್ಮ ಪರ್ವ,6,16
 698.		ಸೂಸಿದವು, ಚೆಲ್ಲಿದವು, ಗದಾ ಪರ್ವ,11,18
 699.		ಸೂಸು, ಹೊರಚೆಲ್ಲು, ಆದಿ ಪರ್ವ,13,64
 700.		ಸೂಸು, ತುಂಬು, ಗದಾ ಪರ್ವ,8,4, ,
 701.		ಸೂಳ್, ಸರದಿ, ಸಭಾ ಪರ್ವ,2,118
 702.		ಸೂಳಡಿಸಿ, ಕ್ರಮವಾಗಿ, ದ್ರೋಣ ಪರ್ವ,9,12
 703.		ಸೂಳಬಂಟಿಕೆ, ಸೂಳೆಯರನ್ನು ಒಲಿಸಿಕೊಂಡು ಸೇವಿಸುವ ವಿದ್ಯೆ, ಭೀಷ್ಮ ಪರ್ವ,5,20
 704.		ಸೂಳವಿಸಿ, ಒಂದಾದ ಮೇಲೊಂದರಂತೆ, ದ್ರೋಣ ಪರ್ವ,1,44
 705.		ಸೂಳವಿಸು, ಬಾರಿಸು, ಉದ್ಯೋಗ ಪರ್ವ,11,34
 706.		ಸೂಳವಿಸು, ಸಾರು, ಉದ್ಯೋಗ ಪರ್ವ,11,14
 707.		ಸೂಳವಿಸು, ಅಬ್ಬರಿಸು, ವಿರಾಟ ಪರ್ವ,4,46
 708.		ಸೂಳವಿಸು, ಕ್ರಮವಾಗಿ, ದ್ರೋಣ ಪರ್ವ,4,52
 709.		ಸೂಳವಿಸು, ಗಜರು, ಭೀಷ್ಮ ಪರ್ವ,5,28
 710.		ಸೂಳವಿಸು, ಗಟ್ಟಿಧ್ವನಿಮಾಡು, ಗದಾ ಪರ್ವ,5,1, ,
 711.		ಸೂಳವಿಸು, ಧ್ವನಿಮಾಡು, ಶಲ್ಯ ಪರ್ವ,2,3
 712.		ಸೂಳಾಯಿತರ, ಪರಿಚಾರಿಕೆಯರ, ಸಭಾ ಪರ್ವ,15,21
 713.		ಸÀೂಳು, ಬಾರಿಬಾರಿಗೂ ಬರುವ, ಗದಾ ಪರ್ವ,11,1
 714.		ಸೂಳು, ಸುಳಿವು, ಆದಿ ಪರ್ವ,8,1
 715.		ಸೂಳು, ಸರದಿ, ಭೀಷ್ಮ ಪರ್ವ,8,1
 716.		ಸೂಳು, ಗರ್ಜನೆ, ದ್ರೋಣ ಪರ್ವ,12,6
 717.		ಸೂಳು À, ಸೂಚನೆ ವೀರಪಣಹ, ಗದಾ ಪರ್ವ,7,52
 718.		ಸೂಳು ಬಂಟರು, ಸರದಿಯ ಸೇವಕರು?, ಕರ್ಣ ಪರ್ವ,1,7
 719.		ಸೂಳುನಗು, ಅವಿರತವಾದ ನಗು, ಸಭಾ ಪರ್ವ,2,76
 720.		ಸೂಳೆದ್ದ, ಬೆದೆಗೆ ಬಂದ, ವಿರಾಟ ಪರ್ವ,7,50
 721.		ಸೂಳೈಸು, ತಟ್ಟು, ದ್ರೋಣ ಪರ್ವ,16,55
 722.		ಸೂಳೈಸು, ಧ್ವನಿಮಾಡು, ಸಭಾ ಪರ್ವ,3,37
 723.		ಸೃಕ್ವ, ಕಟವಾಯಿ, ಭೀಷ್ಮ ಪರ್ವ,3,4
 724.		ಸೃಜಿಸಿದೆವು, ಹುಟ್ಟಿಸಿದೆವು, ವಿರಾಟ ಪರ್ವ,8,34
 725.		ಸೃಣಿ, ಅಂಕುಶ, ಆದಿ ಪರ್ವ,13,23
 726.		ಸೆಂಡು, ಚೆಂಡÀು, ಗದಾ ಪರ್ವ,2,26
 727.		ಸೆಕ್ಕು, ನಾಟಿಸು, ಗದಾ ಪರ್ವ,1,43
 728.		ಸೆಕ್ಕು, ನಾಟಿಸು, ಗದಾ ಪರ್ವ,7,9
 729.		ಸೆಗಳಿ, ಬೇಸಿಗೆ, ದ್ರೋಣ ಪರ್ವ,19,19
 730.		ಸೆಗಳಿಕೆ, ಕಾವು, ದ್ರೋಣ ಪರ್ವ,9,32
 731.		ಸೆಗಳಿಕೆಯ, ನೀರುಕಾಣದ, ಸಭಾ ಪರ್ವ,15,57
 732.		ಸೆಗಳಿಕೆಯ ಸಸಿ, ಬೇಗೆಗೆ ಬಾಡಿದ ಸಸಿ, ವಿರಾಟ ಪರ್ವ,2,47
 733.		ಸೆಗಳಿಗೆ, ಸೆಗಳಿಕೆ (ಪ್ರಾಸಕ್ಕಾಗಿ ಬದಲಾವಣೆ) ಧಗೆ, ವಿರಾಟ ಪರ್ವ,7,32
 734.		ಸೆಜ್ಜೆ, ಶಯ್ಯ, ಸಭಾ ಪರ್ವ,1,46
 735.		ಸೆಜ್ಜೆ, ಮಲಗುವ ಮನೆ, ಆದಿ ಪರ್ವ,12,14
 736.		ಸೆಜ್ಜೆ, ಹಾಸಿಗೆ, ಉದ್ಯೋಗ ಪರ್ವ,1,13
 737.		ಸೆಡೆದು, ಅಳುಕಿ, ಭೀಷ್ಮ ಪರ್ವ,3,26
 738.		ಸೆಡೆಯದೆ, ಹೆದರದೆ, ದ್ರೋಣ ಪರ್ವ,13,56
 739.		ಸೆಣಸು, ಪೈಪೋಟಿ, ಆದಿ ಪರ್ವ,6,0
 740.		ಸೆರಗ, ವಸ್ತ್ರದ ತುದಿ., ದ್ರೋಣ ಪರ್ವ,1,15
 741.		ಸೆರಗಬಿಡಿ, ನನ್ನನ್ನು ಬಿಟ್ಟು ಬಿಡಿ ಎಂಬ ಭಾವ (ಸ್ವತಂತ್ರವಾಗಿರಲು ಬಿಡಿ) ಬೇಹುದು, ವಿರಾಟ ಪರ್ವ,9,38
 742.		ಸೆರಗು, ಉತ್ತರೀಯ, ದ್ರೋಣ ಪರ್ವ,14,36
 743.		ಸೆರೆ, ಕಾಯಿಗಳನ್ನು ಕಟ್ಟಿಹಕುವುದು, ದ್ರೋಣ ಪರ್ವ,10,49
 744.		ಸೆರೆ, ಕಂಠ, ದ್ರೋಣ ಪರ್ವ,12,1
 745.		ಸೆರೆ, ಗಂಟಲ ನರ, ದ್ರೋಣ ಪರ್ವ,8,7
 746.		ಸೆರೆ, ಗಂಟಲಿನ ನರ, ಗದಾ ಪರ್ವ,9,22
 747.		ಸೆರೆಗ ಬೆಳೆದುದು, ಅಕ್ಷಯವಸ್ತ್ರ ಪ್ರದಾನವಾದುದು, ಭೀಷ್ಮ ಪರ್ವ,3,83
 748.		ಸೆರೆನರ, ನರನಾಳಗಳು, ಗದಾ ಪರ್ವ,3,12
 749.		ಸೆರೆನರ, ರಕ್ತನಾಳ, ಗದಾ ಪರ್ವ,1,20
 750.		ಸೆಲ್ಲಹ, ಶಲ್ಯ (ಒಂದು ಆಯುಧ), ದ್ರೋಣ ಪರ್ವ,7,24
 751.		ಸೆಲ್ಲಿಸು, ಶಲ್ಯದಿಂದಿರಿ, ಶಲ್ಯ ಪರ್ವ,2,15
 752.		ಸೆಲ್ಲೆಹ, ಶಲ್ಯ, ದ್ರೋಣ ಪರ್ವ,11,1
 753.		ಸೆಲ್ಲೆಹ, ಶಲ್ಯವೆಂಬ ಆಯುಧ, ಗದಾ ಪರ್ವ,1,29
 754.		ಸೆಲ್ಲೆಹ, ಬರ್ಚಿ, ಕರ್ಣ ಪರ್ವ,18,23
 755.		ಸೆಳೆ, ಬೆತ್ತ, ದ್ರೋಣ ಪರ್ವ,3,24
 756.		ಸೆಳೆ, ಎಳೆ, ಆದಿ ಪರ್ವ,15,28
 757.		ಸೆಳೆ, ದಂಡ, ಕರ್ಣ ಪರ್ವ,3,13
 758.		ಸೆಳೆ, ದೊಣ್ಣೆ, ಕರ್ಣ ಪರ್ವ,24,35
 759.		ಸೆಳೆವ ಸಿಂಧ, ಹಾರಾಡುವ ಬಾವುಟ, ವಿರಾಟ ಪರ್ವ,4,32
 760.		ಸೆಳ್ಳುಗುರು, ಚೂಪಾದ ಉಗುರು, ಆದಿ ಪರ್ವ,13,12
 761.		ಸೇಡುಗೊಳ್ಳು, ಸುರುಟಿಕೊಳ್ಳು, ಆದಿ ಪರ್ವ,19,23
 762.		ಸೇತುಬಂಧನ, ಸೇತುವೆ, ಆದಿ ಪರ್ವ,19,14
 763.		ಸೇದಿಹೋದವು, ಹೀರಿ ಹಿಂಡಿತು, ಭೀಷ್ಮ ಪರ್ವ,10,8
 764.		ಸೇದು, ಹೀರು, ಕರ್ಣ ಪರ್ವ,22,44
 765.		ಸೇದು, ಮೇಲೆ ಎಳೆ, ಕರ್ಣ ಪರ್ವ,25,2
 766.		ಸೇನಾನಿಕರ, ಸೇನಾಪಡೆ, ಭೀಷ್ಮ ಪರ್ವ,7,21
 767.		ಸೇನಾವ್ರಾತ, ಸೇನಾಸಮೂಹ, ಸಭಾ ಪರ್ವ,3,18
 768.		ಸೇನಾಸ್ತಂಭ ಶರ, ಸೇನೆಯನ್ನು ನಿಶ್ಚಲಗೊಳಿಸುವ ಬಾಣ, ಕರ್ಣ ಪರ್ವ,14,35
 769.		ಸೇನೆ, ಅರ್ಜುನನ ಸೈನ್ಯ, ಸಭಾ ಪರ್ವ,3,46
 770.		ಸೇರಿಸು, ಹೊಂದಿಸು., ಆದಿ ಪರ್ವ,18,34
 771.		ಸೇರುವೆ, ಸೇರಿಕೆ, ಆದಿ ಪರ್ವ,18,1
 772.		ಸೇರುವೆ, ಒಡನಾಟ, ಆದಿ ಪರ್ವ,13,60
 773.		ಸೇರೆ, ಬೊಗಸೆ, ವಿರಾಟ ಪರ್ವ,10,56
 774.		ಸೇವ್ಯ, ಸೇವಿಸಲ್ಪಡಬೇಕಾದವನು, ಅರಣ್ಯ ಪರ್ವ,6,64
 775.		ಸೇಸೆ, ಮಂಗಳಾಕ್ಷತೆ, ಆದಿ ಪರ್ವ,13,27
 776.		ಸೇಸೆ, ಮಂತ್ರಾಕ್ಷತೆ (ಅಕ್ಕಿ ಕಾಳು), ವಿರಾಟ ಪರ್ವ,3,80
 777.		ಸೇಸೆ, ಅಕ್ಷತೆಕಾಳು, ಸಭಾ ಪರ್ವ,13,7
 778.		ಸೇಸೆದಳಿ, ಶುಭಾಶಂಸನೆಯಿಂದ ಅಕ್ಷತೆಗಳನ್ನು ಹಾಕು., ಸಭಾ ಪರ್ವ,10,81
 779.		ಸೇಸೆದಳಿ, ಮಂತ್ರಾಕ್ಷತೆಹಾಕು, ಗದಾ ಪರ್ವ,4,36
 780.		ಸೈ, ಚೆನ್ನಾಗಿ ಪರಿ, ವಿರಾಟ ಪರ್ವ,6,16
 781.		ಸೈಕತ, ಉಸುಕು, ಉದ್ಯೋಗ ಪರ್ವ,4,52
 782.		ಸೈಗರೆ, (<ಸಯ್ಗರೆ) ಸತತವಾಗಿ (ಒಂದೇ ಸಮನೆ) ಅಳು, ವಿರಾಟ ಪರ್ವ,3,55
 783.		ಸೈಗರೆ, ಸುರಿಸು, ಭೀಷ್ಮ ಪರ್ವ,6,21
 784.		ಸೈಗರೆ, ಒಂದೇ ಸವನೆ ಸುರಿ, ದ್ರೋಣ ಪರ್ವ,11,10
 785.		ಸೈಗರೆ, ಒಂದೇ ಸಮನೆ ಸುರಿವ, ದ್ರೋಣ ಪರ್ವ,16,2
 786.		ಸೈಗೆಡೆದ, ಬಿದ್ದ, ದ್ರೋಣ ಪರ್ವ,6,52
 787.		ಸೈಗೆರೆವುದೈ, ಸುರಿಸು, ಭೀಷ್ಮ ಪರ್ವ,3,83
 788.		ಸೈರಂಧ್ರಿ, ಸ್ವಾvಂತ್ರ್ಯವನ್ನು ಉಳಿಸಿಕೊಂಡಿರುವ ರಾಣೀವಾಸದ ಪರಿಚಾರಿಕೆ, ವಿರಾಟ ಪರ್ವ,1,7
 789.		ಸೈರಣೆ, ಸಹನೆ, ಉದ್ಯೋಗ ಪರ್ವ,4,78
 790.		ಸೈರಿಸು, ಸಹಿಸಿಕೊಳ್ಳು, ಆದಿ ಪರ್ವ,17,26
 791.		ಸೈರಿಸು, ಸಮಾಧಾನಿಸು, ಗದಾ ಪರ್ವ,6,33
 792.		ಸೈವರಿ, ನೇರವಾಗಿ ಹೋಗು, ದ್ರೋಣ ಪರ್ವ,5,2
 793.		ಸೈವೆರಗು, ಬೆಕ್ಕಸಬೆರಗು, ಉದ್ಯೋಗ ಪರ್ವ,11,43
 794.		ಸೈವೆರಗು, ಸ್ತಬ್ಧತೆ , ವಿರಾಟ ಪರ್ವ,3,31
 795.		ಸೈವೆರಗು, ದಿಗ್ಭ್ರಮೆ , ವಿರಾಟ ಪರ್ವ,3,21, ,
 796.		ಸೈವೊಳೆ, ಒರತೆ, ದ್ರೋಣ ಪರ್ವ,10,28
 797.		ಸೊಂಪಿನ, ಸೊಗಸಿನ, ಭೀಷ್ಮ ಪರ್ವ,5,21
 798.		ಸೊಂಪು, ಸಮೃದ್ಧಿ., ಉದ್ಯೋಗ ಪರ್ವ,7,26
 799.		ಸೊಂಪುಗೆಟ್ಟುದು, ಕಳೆಗುಂದಿತು, ಭೀಷ್ಮ ಪರ್ವ,6,26
 800.		ಸೊಗಡು, ಒಂದು ವಾಸನೆ, ಕರ್ಣ ಪರ್ವ,17,52
 801.		ಸೊಗಸಿ, ಒಪ್ಪಿ , ಗದಾ ಪರ್ವ,7,41, , 
 802.		ಸೊಗಸು, ಸಂತೋಷಪಡುವಂತೆ ಮಾಡು, ಆದಿ ಪರ್ವ,17,25
 803.		ಸೊಗಸು, ಮೆಚ್ಚು, ಅರಣ್ಯ ಪರ್ವ,4,47
 804.		ಸೊಗಸು, ಆನಂದಪಡು, ಅರಣ್ಯ ಪರ್ವ,6,62
 805.		ಸೊಗಸು, ಚೆಲುವು, ಆದಿ ಪರ್ವ,13,2
 806.		ಸೊಗಸುವುದು, ಮನಸ್ಸಿಗೆ ಹಿಡಿಸುತ್ತದೆ, ಭೀಷ್ಮ ಪರ್ವ,10,31
 807.		ಸೊಡರು, ದೀಪ, ಆದಿ ಪರ್ವ,16,15
 808.		ಸೊದೆ, ಹಾಲು, ಆದಿ ಪರ್ವ,12,17
 809.		ಸೊಪ್ಪಾದುದು, ನಿಶ್ಶಕ್ತವಾಯಿತು, ದ್ರೋಣ ಪರ್ವ,4,1
 810.		ಸೊಮ್ಮಿನವರು, ಸಂಬಂಧಿಕರು, ಕರ್ಣ ಪರ್ವ,10,29
 811.		ಸೊಮ್ಮು, ನಂಟಸ್ತಿಕೆ, ಗದಾ ಪರ್ವ,11,18
 812.		ಸೊಮ್ಮು, ಆತ್ಮೀಯ, ಆದಿ ಪರ್ವ,8,55
 813.		ಸೊವಡಿನಾನೆ, ಮದಗಜ, ಅರಣ್ಯ ಪರ್ವ,17,30
 814.		ಸೋಕಿನಲಿ, ಮೈತಾಗುವಷ್ಟು ಸಮೀಪದಲ್ಲಿ, ಗದಾ ಪರ್ವ,11,24
 815.		ಸೋಕು, ಸ್ಪರ್ಶ, ಆದಿ ಪರ್ವ,17,18
 816.		ಸೋಗೆ, ನವಿಲಿನ ಗರಿ, ಅರಣ್ಯ ಪರ್ವ,8,14
 817.		ಸೋಗೆನವಿಲು, ಉದ್ದನೆಗರಿಗಳ ಗಂಡುನವಿಲು, ಭೀಷ್ಮ ಪರ್ವ,4,37
 818.		ಸೋದರ ಭಾವನು, ಭಾವ, ಭೀಷ್ಮ ಪರ್ವ,3,68
 819.		ಸೋದಿಸಿ, ಪರೀಕ್ಷಿಸಿ, ಗದಾ ಪರ್ವ,3,13
 820.		ಸೋದಿಸು, ಶೋಧಿಸು, ವಿರಾಟ ಪರ್ವ,4,26
 821.		ಸೋನೆ, ಮಳೆ, ಆದಿ ಪರ್ವ,20,36
 822.		ಸೋನೆ, ವೃಷ್ಟಿ, ಆದಿ ಪರ್ವ,11,13
 823.		ಸೋಪಾನ, ಮೆಟ್ಟಿಲು, ಉದ್ಯೋಗ ಪರ್ವ,3,9
 824.		ಸೋಮಧರ, ಶಿವ (ಚಂದ್ರನನ್ನು ಧರಿಸಿರುವವನು), ಆದಿ ಪರ್ವ,10,40
 825.		ಸೋಲ, ಸೋಲು (ಗೋಗ್ರಹಣದಲ್ಲಿ ಅರ್ಜುನನಿಂದ ಆದ ಸೋಲು), ವಿರಾಟ ಪರ್ವ,10,72
 826.		ಸೋಹಿನಲಿ, ಬೆನ್ನಟ್ಟಿ ಹೋದಾಗ, ಸಭಾ ಪರ್ವ,15,22
 827.		ಸೋಹಿನಲಿ, ಸೆಳೆತದಲ್ಲಿ, ದ್ರೋಣ ಪರ್ವ,5,74
 828.		ಸೋಹು, ದೀಹದ ಮೃಗ, ಅರಣ್ಯ ಪರ್ವ,5,34
 829.		ಸೋಹು, ಅಟ್ಟು, ಅರಣ್ಯ ಪರ್ವ,5,36
 830.		ಸೋಹು, ಓಡಿಸು, ಆದಿ ಪರ್ವ,7,2
 831.		ಸೋಹೆ, ಸುಳಿವು, ಸಭಾ ಪರ್ವ,12,38
 832.		ಸೌಖ್ಯಸ್ಥಿತಿ, ಸ್ವರ್ಗಸುಖ (ಸಾವು), ಭೀಷ್ಮ ಪರ್ವ,9,4
 833.		ಸೌಬಲ, ಸುಬಲ ದೇಶದ ರಾಜಪುತ್ರನಾದ ಶಕುನಿ, ಗದಾ ಪರ್ವ,2,15
 834.		ಸೌಬಲ, ಸುಬಲರಾಜನ ಮಗ, ಆದಿ ಪರ್ವ,17,14
 835.		ಸೌಬಲ, ಶಕುನಿ, ಉದ್ಯೋಗ ಪರ್ವ,9,40
 836.		ಸೌಬಲರು, ಸುಬಲ ವಂಶದವರು, ದ್ರೋಣ ಪರ್ವ,3,78
 837.		ಸೌಭಟ, ಸುಭಟ, ಗದಾ ಪರ್ವ,9,12
 838.		ಸೌಭಾಗ್ಯ, ಸೌಮಂಗಲ್ಯ ಶೋಭಾ, ಆದಿ ಪರ್ವ,12,0
 839.		ಸೌಭಾಗ್ಯ, ಮಂಗಳ, ಆದಿ ಪರ್ವ,13,1
 840.		ಸೌಮನಸ್ಯ, ಸಂತೋಷ., ಗದಾ ಪರ್ವ,1,25
 841.		ಸೌಮನಸ್ಯ, ಒಳ್ಳೆಯ ಮನಸ್ಸುಳ್ಳವನು , ಗದಾ ಪರ್ವ,6,10
 842.		ಸೌರಂಭ, ಸಂಭ್ರಮ., ಉದ್ಯೋಗ ಪರ್ವ,8,18
 843.		ಸೌರಂಭ, ಸಂಭ್ರಮ/ಸಡಗರ, ಉದ್ಯೋಗ ಪರ್ವ,8,30
 844.		ಸೌರಂಭ, ಸಡಗರ, ಭೀಷ್ಮ ಪರ್ವ,1,56
 845.		ಸೌರಿ, ಶನಿ, ಸಭಾ ಪರ್ವ,13,3
 846.		ಸೌಹಾರ್ದ, ಸೌಜನ್ಯ, ಆದಿ ಪರ್ವ,19,50
 847.		ಸೌಹಾರ್ದ, ಮೈತ್ರಿ, ಆದಿ ಪರ್ವ,16,13
 848.		ಸೌಹಾರ್ದ, ಒಳ್ಳಯ ಹೃದಯದಿಂದ, ಗದಾ ಪರ್ವ,5,53
 849.		ಸೌಹೃದ ವಾಗ್ವಿವಾದ, ಮಿತ್ರÀರ ನಡುವೆ ನಡೆದ ಚರ್ಚೆ, ಭೀಷ್ಮ ಪರ್ವ,1,42
 850.		ಸ್ಕಂದ, ಷಣ್ಮುಖ, ಉದ್ಯೋಗ ಪರ್ವ,3,132
 851.		ಸ್ಖಲನ, ಪ್ರಮಾದ, ಆದಿ ಪರ್ವ,20,2
 852.		ಸ್ಖಲಿತ, ಜಾರಿ, ಆದಿ ಪರ್ವ,13,46
 853.		ಸ್ತಂಭ, ಕಂಬ, ಆದಿ ಪರ್ವ,8,69
 854.		ಸ್ತನಿತ, ಗರ್ಜಿಸುವ, ಆದಿ ಪರ್ವ,9,18
 855.		ಸ್ತೋಮ, ಗುಂಪು , ಅರಣ್ಯ ಪರ್ವ,4,8
 856.		ಸ್ತ್ರೀ, ಮಡದಿ, ಉದ್ಯೋಗ ಪರ್ವ,3,31
 857.		ಸ್ತ್ರೈಣ, ಸ್ತ್ರೀ ಸಂಬಂಧವಾದ, ಸಭಾ ಪರ್ವ,12,7
 858.		ಅಡೆಗಲಸು, ಸ್ತಬ್ಧರನ್ನಾಗಿಸು, ಶಲ್ಯ ಪರ್ವ,2,23
 859.		ಸ್ಥೂಲವಕ್ಷ, ಹಿರಿದಾದ ಎದೆಯುಳ್ಳ, ಗದಾ ಪರ್ವ,10,1
 860.		ಸ್ನಾತಕ, ವೇದಾಧ್ಯಯನ ಮುಗಿಸಿ ಗೃಹಸ್ಥಾಶ್ರಮ ಸೇರಲಿರುವವನು., ಸಭಾ ಪರ್ವ,7,46
 861.		ಸ್ನಾತಕವ್ರತಿ, ಬ್ರಹ್ಮಚರ್ಯದಲ್ಲಿ ವಿದ್ಯಾಭ್ಯಾಸ ಮುಗಿಸಿದವನು., ಸಭಾ ಪರ್ವ,2,55
 862.		ಸ್ಪಂದ, ಸ್ಪಂದನ, ಆದಿ ಪರ್ವ,17,30
 863.		ಸ್ಪಾಧ್ಯಾಯ, ಸ್ವತಂತ್ರ ಕಲಿಕೆ, ಭೀಷ್ಮ ಪರ್ವ,3,9
 864.		ಸ್ಫುಟ, ವ್ಯಕ್ತ, ಉದ್ಯೋಗ ಪರ್ವ,7,28
 865.		ಸ್ಫುರಣ, ಪ್ರತಿಭೆ, ಕರ್ಣ ಪರ್ವ,24,52
 866.		ಸ್ಫುರಣ, ಅದುರುವಿಕೆ, ಅರಣ್ಯ ಪರ್ವ,11,18
 867.		ಸ್ಫುರಣ, ಹೊಳೆ, ಆದಿ ಪರ್ವ,17,31
 868.		ಸ್ಫುರಣ, ಹೊಳೆಯುವುದು, ಗದಾ ಪರ್ವ,5,37
 869.		ಸ್ಫುರಿತ, ಹೊಮ್ಮಿದ, ಸಭಾ ಪರ್ವ,1,5
 870.		ಸ್ಫುರಿತ, ಹೊಳೆಯುತ್ತಿರುವ, ಆದಿ ಪರ್ವ,7,65
 871.		ಸ್ಫುರಿತರವ, ಹೊರಹೊರಟ ಧ್ವನಿ, ಭೀಷ್ಮ ಪರ್ವ,3,2
 872.		ಸ್ಮಾರ್ತ, ಸ್ಮøತಿಯನ್ನು ಅರಿತವನು, ಉದ್ಯೋಗ ಪರ್ವ,3,86
 873.		ಸ್ಮಾರ್ತಮಾರ್ಗ, ಸ್ಮøತಿಗಳಲ್ಲಿ ಹೇಳಿದ್ದು, ಭೀಷ್ಮ ಪರ್ವ,3,54
 874.		ಸ್ಮøತಿ, ಧರ್ಮಶಾಸ್ತ್ರ, ಉದ್ಯೋಗ ಪರ್ವ,4,97
 875.		ಸ್ಯಂದನ, ತೇರು, ಭೀಷ್ಮ ಪರ್ವ,5,2
 876.		ಸ್ರುವ, ಯಜ್ಞಯಾಗಗಳಲ್ಲಿ ಅಗ್ನಿಗೆ ತುಪ್ಪವನ್ನು ಬಿಡುವ ಸಾಧನ, ಗದಾ ಪರ್ವ,1,20
 877.		ಸ್ವಕೀಯ ಕ್ಷಣನ, ತಮ್ಮ ತಮ್ಮವರ ನಾಶ., ದ್ರೋಣ ಪರ್ವ,15,30
 878.		ಸ್ವಸ್ತಿ, ಮಂಗಳ, ವಿರಾಟ ಪರ್ವ,10,34
 879.		ಸ್ವಸ್ತಿ, ಮಂಗಳವಾಚನ/ಶುಭಹಾರೈಕೆ, ಉದ್ಯೋಗ ಪರ್ವ,1,9
 880.		ಸ್ವಸ್ಥಾನ, ಸ್ವಂತಸ್ಥಳ, ಆದಿ ಪರ್ವ,7,41
 881.		ಸ್ವಾಮಿಸಂಪತ್ತು, ದುರ್ಯೋಧನನ ಸಿರಿ, ಭೀಷ್ಮ ಪರ್ವ,1,39
 882.		ಸ್ವಾರ್ಥ, ತನ್ನದು, ಉದ್ಯೋಗ ಪರ್ವ,4,54
 883.		ಸ್ವೇದ, ಬೆವರು, ಸಭಾ ಪರ್ವ,15,40
 884.		ಸ್ವೇದಜ, ಬೆವರಿನಿಂದ ಹುಟ್ಟಿದ ಜೀವರಾಶಿ (ಕ್ರಿಮಿಗಳು), ಸಭಾ ಪರ್ವ,9,13
 885.		ಸ್ವೇದಜಲ, ಬೆವರು, ಭೀಷ್ಮ ಪರ್ವ,3,4
 886.		ಹಂಗ, ಶಕುನ ಪಕ್ಷಿ, ಉದ್ಯೋಗ ಪರ್ವ,1,18
 887.		ಹಂಗ, ಕಳಿಂಗ ಪಕ್ಷಿ, ಸಭಾ ಪರ್ವ,13,2
 888.		ಹಂಗನ ಗರಿ, ಶಕುನದ ಪಕ್ಷಿಯ ಗರಿ, ದ್ರೋಣ ಪರ್ವ,5,13
 889.		ಹಂಗಿಗ, ದಾಕ್ಷಿಣ್ಯಕ್ಕೆ ಒಳಗಾದವನು, ವಿರಾಟ ಪರ್ವ,9,29
 890.		ಹಂಗಿಗರು, ಋಣಿಗಳು, ವಿರಾಟ ಪರ್ವ,8,8
 ಕುಮಾರವ್ಯಾಸ ಕೋಶ ಭಾರತ ಕಥಾಮಂಜರಿ- ಕುವೆಂಪು ಮತ್ತು ಮಾಸ್ತಿವೆಂಕಟೇಶ ಐಯಂಗಾರ್ ಸಂಪಾದಿತ. ಇಂದ:ಮೈಸೂರು ಸಂಸ್ಥಾನದ ಸಾಹಿತ್ಯ ಮತ್ತು ಸಂಸ್ಖರತಿ ಇಲಾಖೆ.ಸಿರಿಗನ್ನಡ ಅರ್ಥಕೋಶ

ನೋಡಿ
ಕುಮಾರವ್ಯಾಸ ಭಾರತ
ಗದುಗಿನ ಭಾರತ ಪದಕೋಶ
ಪರಿವಿಡಿ

ಉಲ್ಲೇಖ
ವರ್ಗ:ಕನ್ನಡ ಸಾಹಿತ್ಯ